Publish Date: Sun, 07 Nov 2021 (11:31 IST)
Updated Date: Sun, 07 Nov 2021 (09:20 IST)
ಬೆಂಗಳೂರು: ಕಾರಣವೇ ಇಲ್ಲದ ಅಮಾಯಕರ ಜೀವ ತೆಗೆಯುತ್ತಿದ್ದ ಸೈಕೋ ಕಿಲ್ಲರ್ ನನ್ನು ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಫುಟ್ ಪಾತ್ ವ್ಯಾಪಾರಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಕ್ಷುಲ್ಲುಕ ಕಾರಣಕ್ಕೆ ಆರೋಪಿ ಕೊಲೆ ಮಾಡಿದ್ದಾನೆ. ಘಟನಾ ದಿನ ಫುಟ್ ಪಾತ್ ವ್ಯಾಪಾರಿ ಬಳಿ ಹಣ ಕೇಳಿದ್ದ.
ಆದರೆ ಆತ ಕೊಡದೇ ಇದ್ದಾಗ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮರುದಿನ ಇನ್ನೊಬ್ಬ ವ್ಯಕ್ತಿಯನ್ನೂ ಇದೇ ರೀತಿ ಕ್ಷುಲ್ಲುಕ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಇದೀಗ 48 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.