Publish Date: Wed, 06 Jan 2021 (09:44 IST)
Updated Date: Wed, 06 Jan 2021 (09:46 IST)
ಭೋಪಾಲ್ : 35 ವರ್ಷದ ಮಹಿಳೆಯೊಬ್ಬಳು ತನ್ನ 38 ವರ್ಷದ ಗಂಡನ ಮುಖಕ್ಕೆ ಬಿಸಿ ಎಣ್ಣೆ ಸುರಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಪತಿ ದಿನಗೂಲಿ ಕಾರ್ಮಿಕನಾಗಿದ್ದು. ಆಗಾಗ ರಾತ್ರಿಯ ವೇಳೆ ಲೇಟಾಗಿ ಮನೆಗೆ ಬರುತ್ತಿದ್ದ. ಇದರಿಂದ ಪತ್ನಿ ಕೋಪಗೊಂಡು ಜಗಳವಾಡುತ್ತಿದ್ದರು. ಕುಟುಂಬದವರು ಮಧ್ಯ ಪ್ರವೇಶಿಸಿ ಇವರ ಜಗಳವನ್ನು ನಿಲ್ಲಿಸುತ್ತಿದ್ದರು. ಆದರೆ ಬೆಳಿಗ್ಗೆ ಪತಿ ಮಲಗಿದ್ದಾಗ ಬಿಸಿ ಎಣ್ಣೆಯನ್ನು ಆತನ ಮುಖದ ಮೇಲೆ ಸುರಿದಿದ್ದಾಳೆ. ಕುಟುಂಬದವರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪತ್ನಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.