ಚೆನ್ನೈ : ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಪ್ರಸ್ತುತ ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಅವರು ಇಲ್ಲಿಯವರೆಗೆ ನಿರ್ದೇಶಿಸಿದ ಎರಡು ಚಿತ್ರಗಳು ಬ್ಲಾಕ್ ಬಾಸ್ಟರ್ ಆಗಿದೆ.
ಇದೀಗ ಅವರು ನಿರ್ದೇಶಿಸಿರುವ ನಟ ವಿಜಯ್ ಹಾಗೂ ವಿಜಯ್ ಸೇತುಪತಿ ಅವರು ಜೊತೆಯಾಗಿ ನಟಿಸಿದ ಮಾಸ್ಟರ್ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಇದರ ಬೆನ್ನಲೇ ಅವರು ಕಮಲ್ ಹಾಸನ್ ಜೊತೆ ವಿಕ್ರಮ್ ಚಿತ್ರ ಮಾಡಲು ಹೊರಟಿದ್ದಾರೆ. ಹಾಗೇ ರಾಮ್ ಚರಣ್ ಸೇರಿದಂತೆ ಪ್ರಮುಖ ತೆಲುಗು ನಟರೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಲೋಕೇಶ್ , ಅವರು ತಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಮಾಸ್ಟರ್ ಮತ್ತು ವಿಕ್ರಮ್ ಚಲನಚಿತ್ರಗಳು ಪೂರ್ಣಗೊಂಡ ಬಳಿಕ ನಿರ್ಧರಿಸುತ್ತೇನೆ ಎಂದು ತಿಳಿಸಿದ್ದಾರೆ.