ಚೆನ್ನೈ : ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಚಿತ್ರ ಇದೇ ಜನವರಿಯಂದು ಸಂಕ್ರಾಂತಿ ಹಬ್ಬದ ವಿಶೇಷ ದಿನದಂದು ಬಿಡುಗಡೆಯಾಗಲಿದೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇದೀಗ ಚಿತ್ರತಂಡ ಸೆನ್ಸಾರ್ ಬಗ್ಗೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸೆನ್ಸಾರ್ ಮಾಸ್ಟರ್ ಚಿತ್ರದ ಬಹುತೇಕ ದೃಶ್ಯಗಳಿಗೆ ಕತ್ತರಿ ಹಾಕಿದೆ ಎನ್ನಲಾಗಿದೆ. ಕೆಲವು ಪ್ರಮುಖ ದೃಶ್ಯಗಳನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ.