ತ್ರಿಪುರಾ: ರಾಜಕೀಯ ವ್ಯಕ್ತಿಗಳು ಯಾವತ್ತೂ ತಾವು ಜನ ಸೇವೆ ಮಾಡುವವರು, ಹೆಚ್ಚು ಆಸ್ತಿ ಮಾಡಿಕೊಂಡಿಲ್ಲ ಎಂದೇ ಹೇಳಿಕೊಳ್ಳುತ್ತಾರೆ. ಹಾಗಿದ್ದರೂ ನಿಜವಾಗಿ ನಮ್ಮ ದೇಶದಲ್ಲಿ ಬಡ ಸಿಎಂ ಯಾರು ಗೊತ್ತಾ?
ತ್ರಿಪುರಾದ ಸಿಎಂ ಮಾಣಿಕ್ ಸರ್ಕಾರ್ ಚುನಾವಣೆಗಾಗಿ ಆಸ್ಥಿ ಘೋಷಿಸುವಾಗ ತಮ್ಮಲ್ಲಿರುವ ನಗದು 3,930 ರೂ. ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದೇಶದ ಅತ್ಯಂತ ಬಡ ಸಿಎಂ ತಾನು ಎಂದು ಘೋಷಿಸಿಕೊಂಡಿದ್ದಾರೆ.
ತಮಗೆ ಸಿಗುವ ವೇತನವನ್ನೆಲ್ಲಾ ತಾವು ಪ್ರತಿನಿಧಿಸುವ ಸಿಪಿಐ(ಎಂ) ಪಕ್ಷಕ್ಕೆ ದೇಣಿಗೆ ನೀಡುತ್ತಾರೆ. ಪಕ್ಷದ ವತಿಯಿಂದ ಅವರಿಗೆ 5,000 ಭತ್ಯೆ ಸಿಗುತ್ತದೆ. ಅವರ ಬಳಿ ಸ್ವಂತ ಮೊಬೈಲ್, ನಿವೇಶನ ಇಲ್ಲ. 20 ವರ್ಷಗಳಿಂದ ಅವರು ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ವಾಸ್ತವ್ಯವಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿ 2,410 ರೂ. ಅಷ್ಟೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ