ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ದಿನ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಇಡೀ ದೇಶವೇ ಟಿವಿ ಮುಂದೆ ಕೂತು ಕುತೂಹಲದಿಂದ ಫಲಿತಾಂಶ ನೋಡುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಬೇರೆಯೇ ಕೆಲಸ ಮಾಡುತ್ತಿದ್ದರು!
ಗೆದ್ದ ಬಳಿಕ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಮೋದಿ ನಾನು ಈವತ್ತು ಫಲಿತಾಂಶದ ಬಗ್ಗೆ ಹೆಚ್ಚು ಗಮನಕೊಡಲಿಲ್ಲ. ಎಲ್ಲೆಲ್ಲಿ ಎಷ್ಟು ಸೀಟು ಬಂದಿದೆ ಎಂದು ನೋಡಲು ನನಗೆ ಸಮಯ ಸಿಗಲಿಲ್ಲ. ನಾನು ಬೇರೆ ಕೆಲಸದಲ್ಲಿ ಮಗ್ನನಾಗಿದ್ದೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಆ ಕೆಲಸಗಳು ಏನೆಂದು ಬಹಿರಂಗವಾಗಿದೆ. ಪ್ರಧಾನಿ ಮೋದಿ ಬೆಳಿಗ್ಗೆಯಿಂದಲೂ ತಮಗೆ ಬಂದ ಈಮೇಲ್ ಗಳನ್ನು ನೋಡುತ್ತಾ, ಫಾರ್ವರ್ಡ್ ಮಾಡುತ್ತಾ, ಉತ್ತರಿಸುತ್ತಾ ತಣ್ಣಗೆ ತಮ್ಮ ಕೊಠಡಿಯಲ್ಲಿ ಕೂತಿದ್ದರಂತೆ. 11 ಗಂಟೆಯ ನಂತರವಷ್ಟೇ ತಮ್ಮ ಆಪ್ತರ ಬಳಿ ಕೇಳಿ ಬಿಜೆಪಿ ಲೀಡ್ ಹೇಗಿದೆ ಎಂದು ತಿಳಿದುಕೊಂಡರಂತೆ. ಯಾಕೆಂದರೆ ಅವರಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಆ ಮಟ್ಟಿಗೆ ನಂಬಿಕೆ ಇತ್ತು!
ಮಧ್ಯಾಹ್ನದ ಬಳಿಕ ತಮ್ಮ ವಿದೇಶೀ ಸ್ನೇಹಿತರು ದೂರವಾಣಿ ಕರೆ ಮಾಡಲಾರಂಭಿಸಿದಾಗ ಉತ್ತರಿಸುತ್ತಾ ಕಾಲ ಕಳೆದರಂತೆ. ಅಂತೂ ಮತ ಎಣಿಕೆ ದಿನ ಇಡೀ ದೇಶ ಟೆನ್ಷನ್ ನಲ್ಲಿದ್ದರೆ ಮೋದಿ ಮಾತ್ರ ತಣ್ಣಗೆ ಕುಳಿತಿದ್ದರಂತೆ!