Publish Date: Sat, 25 May 2019 (17:07 IST)
Updated Date: Sat, 25 May 2019 (17:09 IST)
ಜೆಡಿಎಸ್ ನವರು ಮತ್ತು ಹೆಚ್.ಡಿ.ದೇವೇಗೌಡರ ಕುಟುಂಬದವರು ಜ್ಯೋತಿಷಿಗಳು, ಮಾಟ- ಮಂತ್ರದ ಬೆನ್ನು ಹತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಬಿ.ಎಸ್.ಯಡಿಯೂರಪ್ಪ ದೈವ ಭಕ್ತರು. ನಾಡಿಗೆ ಒಳ್ಳೆಯದಾಗಲಿ ಎಂದು ಹೋಮ -ಹವನ ಮಾಡಿಸಿದ್ರು. ಅದಕ್ಕೆ ಬಿಜೆಪಿಗೆ 25 ಸೀಟುಗಳು ಬಂದಿವೆ.
ಜೆಡಿಎಸ್ ನವರು, ದೇವೇಗೌಡರ ಕುಟುಂಬದವರು ಹಾಗಲ್ಲ ಜ್ಯೋತಿಷಿಗಳು, ಮಾಟ ಮಂತ್ರದ ಬೆನ್ನು ಹತ್ತಿದ್ದರು. ಅದಕ್ಕೆ ಹೀಗಾಯ್ತು. ರೇವಣ್ಣ, ಭವಾನಿ ರೇವಣ್ಣ ನಿಂಬೆಹಣ್ಣು ಮಂತ್ರ ಮಾಡಿಸಿ ಪಾಪ ದೇವೇಗೌಡರನ್ನೆ ಬಲಿ ತೆಗೆದುಕೊಂಡರು. ಈಗಲೂ ಕುಮಾರಸ್ವಾಮಿಗೆ ಮಾನ ಮರ್ಯಾದೆ, ನೈತಿಕತೆ ಇದ್ದರೆ ಜನಾದೇಶಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಬೇಕು ಎಂದರು.
ಕಾಂಗ್ರೆಸ್ ಶಾಸಕರನ್ನು ಅತೃಪ್ತರು ಎನ್ನುವುದು ಸರಿಯಲ್ಲ. ಅವರೆಲ್ಲಾ ಗೌರವಾನ್ವಿತ ಶಾಸಕರು. ಅವರಲ್ಲಿ ಕೆಲವರಿಗೆ ಸಚಿವ ಸ್ಥಾನ ತಪ್ಪಿಸಿದ್ರು. ಕ್ಷೇತ್ರಕ್ಕೆ ಅನುದಾನ ಸಿಗದಂತೆ ಮಾಡಿದ್ರು. ಅವರನ್ನೆಲ್ಲಾ ಎಷ್ಟು ದಿನ ಅಂತಾ ಹಿಡಿದಿಟ್ಟುಕೊಳ್ಳುತ್ತೀರಿ? ಇಷ್ಟರಲ್ಲೇ ಅವರೆಲ್ಲಾ ಹೊರಗೆ ಬರುತ್ತಾರೆ. ಈ ಸರ್ಕಾರ ಪತನ ಆಗೋದು ನಿಶ್ಚಿತ ಅಂತ ಹೇಳಿದ್ರು.