Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಂಕೋಲಾ : ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದ ವರುಣ ಈಗ ಕೊಂಚ ಶಾಂತವಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮಳೆಯಿಂದಾಗಿ ಅಂಕೋಲದ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಾತ್ಕಾಲಿಕ ಸೇತುವೆ ಹಾಗೂ ಗುಳ್ಳಾಪುರ ಮತ್ತು ಡೊಂಗ್ರಿ ಗ್ರಾಮ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.
ಭಟ್ಕಳದ ಜಾಲಿಯಲ್ಲಿ ಮಣ್ಣು ಕುಸಿದು ಕಾರು ಹಳ್ಳಕ್ಕೆ ಬಿದ್ದಿದೆ. ದಾವಣಗೆರೆಯ ನ್ಯಾಮತಿ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಕಟಾವು ಮಾಡಿ ಬಣವೆ ಹಾಕಿದ್ದ ಭತ್ತ ಮಳೆ ನೀರಿಗೆ ನೆನದು ಮೊಳಕೆ ಬಂದಿವೆ.
ಮೊಳಕೆಯೊಡೆದ ಭತ್ತ ಹಿಡಿದು ವೃದ್ಧೆ ಕಾಳಮ್ಮ ಕಣ್ಣೀರಿಟ್ಟಿದ್ದಾರೆ.