Publish Date: Mon, 09 May 2022 (20:13 IST)
Updated Date: Mon, 09 May 2022 (20:16 IST)
ರಜಾ ದಿನಗಳನ್ನು ಎಂಜಾಯ್ ಮಾಡುವುದಕ್ಕೆ ಜನ ಲಕ್ಷಾಂತರ ಸಂಖ್ಯೆಯಲ್ಲಿ ಕರಾವಳಿಯ ಬೀಚ್ ಕಡೆಗೆ ಬರುತ್ತಾರೆ..ವೀಕೆಂಡ್ ಬಂದ್ರೆ ಸಾಕು ಬೀಚ್ಗಳು ತುಂಬಿ ತುಳುಕುತ್ತವೆ. ಹೀಗಿರುವಾಗ ಉಡುಪಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ಮಲ್ಪೆ ಬೀಚ್ನಲ್ಲಿ ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಅಲ್ಲದೇ ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದ್ರೀಗ ಅಲೆಗಳ ಅಬ್ಬರದಿಂದ ತಾಂತ್ರಿಕ ದೋಷವುಂಟಾಗಿ ತೇಲುವ ಸೇತುವೆ ಸ್ಥಗಿತಗೊಂಡಿದೆ..ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಾಹಕರೇ ಮಾಹಿತಿ ನೀಡಿದ್ದಾರೆ..ದಿಢೀರ್ ತಾಂತ್ರಿಕ ದೋಷದಿಂದ ತೇಲುವ ಸೇತುವೆಯಲ್ಲಿ ಎಂಜಾಯ್ ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.
geetha
Publish Date: Mon, 09 May 2022 (20:13 IST)
Updated Date: Mon, 09 May 2022 (20:16 IST)