Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿಯೇ ಮುಂದುವರೆದಿದೆ..ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಳೆಯ ಆರ್ಭಟ ನಿಂತಿಲ್ಲ..ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಸೇತುವೆಯೊಂದು ಕೊಚ್ಚಿಹೋಗಿದೆ..ಬೋಗಾದಿ ನಾಗಲಿಂಗೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಮಳೆಯ ರಭಸಕ್ಕೆ ರಸ್ತೆ ಅರ್ಧಕ್ಕೆ ಮುರಿದು ಬಿದ್ದಿದೆ..ನಿರಂತರ ಮಳೆಯಿಂದ ಮೋರಿಗಳು ತುಂಬಿ ಹರಿಯುತ್ತಿವೆ. ಮೋರಿಯ ನೀರು ಮನೆಗಳಿಗೆ ನುಗ್ಗಿದ್ರಿಂದ ಅವಾಂತರ ಸೃಷ್ಟಿಯಾಗಿದೆ..ಇನ್ನು, ಜಿಲ್ಲೆಯಲ್ಲಿ ಬೆಂಬಿಡದೆ ಧಾರಾಕಾರವಾಗಿ ಸುರಿಯುತ್ತಿರೋ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.