ನವದಿಲ್ಲಿ : ಮೇವು ಹಗರಣ ಪ್ರಕರಣದಲ್ಲಿ ದೋಷಿಯಾಗಿರುವ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸುಧಾರಣೆಯಾದ ಕಾರಣ ಏಮ್ಸ್ ಆಸ್ಪತ್ರೆಯಿಂದ ರಾಂಚಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಶಿಫಾರಸ್ಸು ಮಾಡರುವ ಹಿನ್ನಲೆಯಲ್ಲಿ ಇದರಲ್ಲಿ ಪ್ರಧಾನಿ ಮೋದಿ ಅವರ ಸಂಚು ಇದೆ ಎಂದು ಲಾಲು ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಲಾಲೂ ಪ್ರಸಾದ್ ಯಾದವ್ ಅವರು,’ ಇದು ಅನ್ಯಾಯ, ನನ್ನ ಆರೋಗ್ಯ ಕ್ಷೀಣಿಸಲಿ ಎಂದು ನನ್ನನ್ನು ಸರಿಯಾದ ವ್ಯವಸ್ಥೆ ಇಲ್ಲದ ಆಸ್ಪತ್ರೆಗೆ ಪುನಃ ಕಳುಹಿಸುತ್ತಿದ್ದಾರೆ. ನನ್ನ ಕಷ್ಟದ ಸಮಯ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.
ರೋಗಿಗೆ ಸಮಾಧಾನ ಕೊಡುವಂತಹ ಚಿಕಿತ್ಸೆಯನ್ನು ಬೇಕಾದ ಕಡೆ ತೆಗೆದುಕೊಳ್ಳುವ ಹಕ್ಕು ಇದೆ. ಏಮ್ಸ್ ಒಳ್ಳೆಯ ಆಸ್ಪತ್ರೆಯಾಗಿದ್ದು ಯಾವ ಕಾರಣಕ್ಕೆ ಮತ್ತೆ ರಾಂಚಿ ಆಸ್ಪತ್ರೆಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಸಬೇಕಿದೆ. ನಿಮ್ಮ ನಿರ್ಧಾರದಿಂದ ನನ್ನ ಆರೋಗ್ಯಕ್ಕೆ ಮುಂದೆ ಅಪಾಯ ಸಂಭವಿಸಿದಲ್ಲಿ ನಿಮ್ಮನ್ನೇ ಹೊಣೆ ಮಾಡಲಾಗುವುದು. ನನ್ನ ಕಾಯಿಲೆಗೆ ಚಿಕಿತ್ಸೆ ಕೊಡುವುದಕ್ಕೆ ರಾಂಚಿ ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆ ಇಲ್ಲ ಹಾಗಾಗಿ ರಾಂಚಿ ಆಸ್ಪತ್ರೆಗೆ ವಾಪಸ್ ಕಳುಹಿಸದಂತೆ ಲಾಲೂ ಪ್ರಸಾದ್ ಯಾದವ್ ಅವರು ಏಮ್ಸ್ ಆಸ್ಪತ್ರೆಯ ನಿರ್ದೇಶಕ ರಣದೀಪ್ ಗಲೇರಿಯಾ ಅವರಿಗೆ ಪತ್ರವನ್ನು ಬರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ