Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪೆಂಡಿಕ್ಸ್ ಕಾಯಿಲೆಗೆ ರಾಮಬಾಣ ಈ ಮನೆಮದ್ದುಗಳು

ಅಪೆಂಡಿಕ್ಸ್ ಕಾಯಿಲೆಗೆ ರಾಮಬಾಣ ಈ ಮನೆಮದ್ದುಗಳು
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (06:45 IST)
ಬೆಂಗಳೂರು : ನಮ್ಮ ಆರೋಗ್ಯ ಹಾಳಾಗಲು ನಮ್ಮ ಇಂದಿನ ದಿನಮಾನಗಳ ಜೀವನ ಶೈಲಿಯೇ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ನಾವು ತಿನ್ನುವ ಆಹಾರಗಳು ಕುಡಿಯುವ ಪಾನೀಯಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನ ಬೀರುತ್ತವೆ. ಈ ಕಾಯಿಲೆಗಳಲ್ಲಿ  ಅಪೆಂಡಿಕ್ಸ್ ಕೂಡ ಒಂದು.


ನಾವು ವಾತಾವರಣ ಬದಲಾದರೆ ಹೆಚ್ಚಾಗಿ ಕಾಯಿಸಿ ಆರಿಸಿದ ನೀರನ್ನ ಕುಡಿಯುತ್ತೇವೆ, ಹೀಗೆ ಬಿಸಿ ನೀರನ್ನ ಕುಡಿಯುವುದರಿಂದ ಅರೋಗ್ಯ ಹಾಳಾಗುವುದಿಲ್ಲ. ಈ ಅಪೆಂಡಿಕ್ಸ್ ಕಾಯಿಲೆಗೂ ಸಹ ಬಿಸಿ ನೀರು ಬಹಳ ಮುಖ್ಯ. ಬಿಸಿ ನೀರು ರೋಗಿಯ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಬಿಸಿ ನೀರು ಕರುಳನ್ನು ಸ್ವಚ್ಛಗೊಳಿಸಲು ಸಹಾಯಕವಾಗಿತ್ತದೆ. ಕರುಳಿನಲ್ಲಿ ವಿಷಯುಕ್ತ ಅಂಶ ತುಂಬಿದ್ದಾರೆ ಕರುಳಿನಲ್ಲಿ ಉರಿಯೂತ ಕಂಡುಬರುತ್ತದೆ, ಬಿಸಿ ನೀರು ಕುಡಿಯುವುದರಿಂದ ಕರುಳಿನಲ್ಲಿರುವ ವಿಷಾದ ಅಂಶ ಹೊರಹೋಗುತ್ತದೆ. 

* ನಾವು ದಿನನಿತ್ಯ ಅಡುಗೆಗೆ ಬಳಸುವ ಹಲವು ಕಾಳುಗಳು ಬಹಳ ಪೌಷ್ಟಿಕತೆಯನ್ನು ಹೊಂದಿವೆ. ಅದರಲ್ಲೂ ಹೆಸರು ಕಾಳಿನಲ್ಲಿ ವಿವಿಧ ಪೋಷಕಾಂಶಗಳು ಅಡಗಿವೆ. ಹೆಸರು ಕಾಳನ್ನ ನೆನೆಸಿ ಮೊಳಕೆ ಕಟ್ಟಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹೆಸರು ಕಾಳುಗಳನ್ನ ನೆನೆಸಿ ದಿನಕ್ಕೆ 2-3 ಸಲ ಒಂದು ಚಮಚದಷ್ಟು ತಿಂದರೆ ಸಾಕು ನಮ್ಮ ದೇಹಕ್ಕೆ ಬೇಕಾದಷ್ಟು ಪೋಷಕಾಂಶಗಳು ದೊರೆಯುತ್ತವೆ.


* ಅಪೆಂಡಿಕ್ಸ್ ಚಿಕಿತ್ಸೆಗೆ ಬಹಳ ಪರಿಣಾಮಕಾರಿ ಮಜ್ಜಿಗೆ. ಮಜ್ಜಿಗೆಯು ಅಪಾಂಡಿಕ್ಸ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಮಜ್ಜಿಗೆ ಅಪಾಂಡಿಕ್ಸ್ ನೋವನ್ನು ಕಡಿಮೆ ಮಾಡುತ್ತದೆ. ಈ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ಬಾಯಿಗೂ ರುಚಿ ಆರೋಗ್ಯಕ್ಕೂ ಉತ್ತಮ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೀಲು, ಮಂಡಿ ನೋವು ಸಮಸ್ಯೆ ಇರುವವರು ಈ ಕಷಾಯ ಕುಡಿಯಿರಿ