Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಥಸಪ್ತಮಿ ದಿನ ಈ ಕೆಲಸಗಳನ್ನು ಮಾಡಿದರೆ ನಿಮಗೆ ಶ್ರೇಯಸ್ಕರ

ರಥಸಪ್ತಮಿ ದಿನ ಈ ಕೆಲಸಗಳನ್ನು ಮಾಡಿದರೆ ನಿಮಗೆ ಶ್ರೇಯಸ್ಕರ
ಬೆಂಗಳೂರು , ಶನಿವಾರ, 28 ಏಪ್ರಿಲ್ 2018 (14:28 IST)
ಹಿಂದೂಗಳು ಮಾಘ ಶುದ್ಧ ಸಪ್ತಮಿ ದಿನ ರಥಸಪ್ತಮಿ ಆಚರಿಸುತ್ತಾರೆ. ಸಕಲ ಜಗತ್ತಿಗೆ ಬೆಳಕು ನೀಡುವ ಸೂರ್ಯನು ರಥವನ್ನು ಹತ್ತಿ ತನ್ನ ದಿಕ್ಕನ್ನು ಬದಲಾಯಿಸಿಕೊಳ್ಳುವ ದಿನವೇ ರಥಸಪ್ತಮಿ. ಮಾಘಶುದ್ಧ ಸಪ್ತಮಿ ದಿನ ಸೂರ್ಯ ಭಗವಂತ ಆವಿರ್ಭಸಿದ ಎಂದೂ, ಆ ದಿನವನ್ನೇ ಅವರು ಹುಟ್ಟಿದ ದಿನವಾಗಿ ಸಹ ಹೇಳುತ್ತಾರೆ.
ಅಷ್ಟು ಪವಿತ್ರವಾದ ದಿನ ಈ ಕೆಲಸಗಳನ್ನು ಮಾಡುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ಅಷ್ಟೇ ಅಲ್ಲ ದೀರ್ಘಕಾಲಿಕ ಸಮಸ್ಯೆಗಳಿಂದ ಸಹ ಉಪಶಮನ ಲಭಿಸಲಿದೆ.
 
*ರಥಸಪ್ತಮಿ ಮೊದಲ ದಿನ ರಾತ್ರಿ ಉಪವಾಸ ಇದ್ದು ಬೆಳಗ್ಗೆ ಸೂರ್ಯೋದಕ್ಕೆ ಮೊದಲೇ ಎದ್ದು ಸ್ನಾನ ಮಾಡಬೇಕು.
 
*ಪುರುಷರು ಏಳು ಎಕ್ಕದ ಎಲೆ, ಮಹಿಳೆಯರು ಏಳು ಹುರುಳಿ ಎಲೆಗಳನ್ನು ತಲೆ, ಭುಜದ ಮೇಲೆ ಇಟ್ಟುಕೊಂಡು(|| ಜನನೀತ್ವಂ ಹಿ ಲೋಕಾನಂ ಸಪ್ತಮಿ ಸಪ್ತಸಪ್ತಿಕೇ, ಸಪ್ತವ್ಯಾಹೃತಿಕೇ ದೇವಿ! ಸಮಸ್ತೆ ಸೂರ್ಯಮಾತೃಕೆ||)ಈ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡಬೇಕು.
 
*ರಥ ಸಪ್ತಮಿ ದಿನ ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡುವುದು ಶ್ರೇಯಸ್ಕರ.
 
*ರಥ ಸಪ್ತಮಿದಿನ ಸೂರ್ಯನ ಕಿರಣಗಳು ಬೀಳುವ ಕಡೆ ಪೂರ್ವ ದಿಕ್ಕಿನಲ್ಲಿ ತುಳಸಿಕಟ್ಟೆ ಪಕ್ಕದಲ್ಲಿ ಹಸುವಿನ ಸಗಣಿಯಿಂದ ಸಾರಿಸಿ, ಅದರ ಮೇಲೆ ರಂಗೋಲಿ ಹಾಕಿ, ಒಲೆ ಇಟ್ಟು ಹೊತ್ತಿಸಿ, ಹಾಲು ಉಕ್ಕಿಸಿ, ಆ ಹಾಲಿನಲ್ಲಿ ಹೊಸ ಅಕ್ಕಿ, ಬೆಲ್ಲ, ತುಪ್ಪ, ಏಲಕ್ಕಿ ಹಾಕಿ ಪರಮಾನ್ನ ತಯಾರಿಸಿದರೆ ಒಳಿತಾಗುತ್ತದೆ.
 
*ತುಳಸಿ ಕಟ್ಟೆ ಎದುರಿಗೆ ಹುರುಳಿ ಕಾಯಲ್ಲಿ ರಥ ಮಾಡಿ ಹುರಳಿ ಎಲೆಗಳ ಮೇಲೆ ಪರಮಾನ್ನ ಇಟ್ಟು ದೇವರಿಗೆ ನೈವೇದ್ಯ ಸಮರ್ಪಿಸಬೇಕು.
 
*ರಥಸಪ್ತಮಿ ದಿನ ದೇವರಿಗೆ ಕೆಂಪು ಗುಲಾಬಿ ಹೂಗಳಿಂದ ಪೂಜಿಸಿದರೆ ಒಳಿತು. ಎಳ್ಳುಂಡೆಗಳನ್ನು ದಾನ ನೀಡಿದರೆ ಸಕಲ ಶುಭಗಳು ಉಂಟಾಗುತ್ತವೆ
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಪೂಜೆ ಮಾಡುವಾಗ ಕರ್ಪೂರ ಆರತಿ ಬೆಳಗುವುದು ಇದೇ ಕಾರಣಕ್ಕಾಗಿ