ನವದಿಲ್ಲಿ : ಚೀನಾ ದೇಶಕ್ಕೆ ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನ ಸ್ಟಾರ್ ನಟರೊಬ್ಬರನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ.
ಹೌದು. ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಧ್ಯಕ್ಷ ಜನ್ಪಿಂಗ್ ಅವರನ್ನು ಭೇಟಿ ಮಾಡಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಆ ಸಂದರ್ಭದಲ್ಲಿ ಚೀನಾಗೆ ಭಾರತದ ಬ್ರಾಂಡ್ ಅಂಬಾಸಿಡರ್ ಆಯ್ಕೆ ವಿಷಯವನ್ನು ಚರ್ಚಿಸಿದ್ದಾರೆ.
ಬಾಲಿವುಡ್ ನಟ ಅಮೀರ್ ಖಾನ್ ಅವರ 'ದಂಗಲ್' ಮತ್ತು 'ಸೀಕ್ರೆಟ್ ಸೂಪರ್ಸ್ಟಾರ್' ಚಿತ್ರಗಳಿಗೆ ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಕಿದ್ದು, ‘ನಾನೂ ಸೇರಿದಂತೆ ಚೀನಾದ ಹಲವು ಜನತೆ ಅಮೀರ್ ನಟನೆಯ ಸ್ಫೂರ್ತಿದಾಯಕ 'ದಂಗಲ್' ಸಿನಿಮಾವನ್ನು ನೋಡಿದ್ದೇವೆ’ ಎಂದು ಚೀನಾದ ವಿದೇಶಾಂಗ ಸಚಿವಾಯಲಯದ ವಕ್ತಾರ ಹುವಾ ಚುನೈಯಿಂಗ್ ಅವರು ಕೂಡ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ಮತ್ತು ವ್ಯಾಪಾರ ವೃದ್ಧಿ ಗಮನದಲ್ಲಿಟ್ಟು ಅಮೀರ್ ಖಾನ್ ಅವರನ್ನು ರಾಯಭಾರಿಯಾಗಿ ನೇಮಿಸಲು ಮುಂದಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ