Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಲಕಿ ಮೇಲೆ ಅತ್ಯಾಚಾರ; ಮಗು ಹುಟ್ಟಿದ ಮೇಲೆ ಬಯಲಾಯ್ತು ಸತ್ಯ!?

ಬಾಲಕಿ ಮೇಲೆ  ಅತ್ಯಾಚಾರ; ಮಗು ಹುಟ್ಟಿದ ಮೇಲೆ ಬಯಲಾಯ್ತು ಸತ್ಯ!?
ಮುಂಬೈ , ಗುರುವಾರ, 23 ಡಿಸೆಂಬರ್ 2021 (09:09 IST)
ಮುಂಬೈ : ಮಹಾರಾಷ್ಟ್ರದ ಮುಂಬೈನ 15 ವರ್ಷದ ಹುಡುಗಿಯನ್ನು ಮದುವೆಯಾಗಿ, ಹಲವಾರು ಬಾರಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಆ 15 ವರ್ಷದ ಬಾಲಕಿ ಮಗುವಿಗೆ ಜನ್ಮವನ್ನೂ ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಆರೋಪಿ ಯುವಕನ ಪೋಷಕರು ಮತ್ತು ವಿವಾಹವನ್ನು ನೆರವೇರಿಸಿದ ಧರ್ಮಗುರುಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶುಕ್ರವಾರ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರ ಪ್ರಕಾರ ಜನವರಿಯಲ್ಲಿ ಬಾಲ್ಯ ವಿವಾಹ ನಿಶ್ಚಯವಾಗಿತ್ತು.

“ಮಗುವಿಗೆ ಜನ್ಮ ನೀಡುವ ಮೊದಲು, ಆಸ್ಪತ್ರೆಯ ವೈದ್ಯರು ಆ ಬಾಲಕಿಯ ವಯಸ್ಸು ಎಷ್ಟೆಂದು ಆಕೆಯ ಗಂಡ ಮತ್ತು ಅತ್ತೆಯನ್ನು ಕೇಳಿದಾಗ ಅವರು ಆಕೆಗೆ 20 ವರ್ಷ ವಯಸ್ಸಾಗಿದೆ ಎಂದು ಸುಳ್ಳು ಹೇಳಿದ್ದರು” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತವರು ಮನೆಗೆ ಹೋಗುತ್ತೇನೆಂದು ಹಠ ಮಾಡಿದ ಹೆಂಡತಿಯನ್ನು ಗಂಡ ಏನ್ ಮಾಡ್ದಾ ಗೋತ್ತ!