Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ : ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗಿ ಹಲವಾರು ಬಾರಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಶುಕ್ರವಾರ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಜನವರಿಯಲ್ಲಿ ಅಪ್ರಾಪ್ತೆಗೆ ಬಾಲ್ಯವಿವಾಹ ನಿಶ್ಚಯವಾಗಿತ್ತು. ಮಗುವಿಗೆ ಜನ್ಮ ನೀಡುವ ಮೊದಲು, ಆಸ್ಪತ್ರೆಯ ವೈದ್ಯರು ತಾಯಿಯ ವಯಸ್ಸನ್ನು ಕೇಳಿದಾಗ, ಆಕೆಯ ಪತಿ ಹಾಗೂ ಅತ್ತೆಗೆ 20 ವರ್ಷ ವಯಸ್ಸಾಗಿದೆ ಎಂದು ವೈದ್ಯರಿಗೆ ತಿಳಿಸಿದ್ದರು.
ಆದರೆ, ವೈದ್ಯರು ಬಾಲಕಿಯ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದಾಗ ಆಕೆಯ ನಿಜವಾದ ವಯಸ್ಸು ಬಹಿರಂಗವಾಗಿದೆ. ಅದರಲ್ಲಿ ಅವಳು ಜೂನ್ 2006ರಲ್ಲಿ ಜನಿಸಿರುವುದು ತಿಳಿದುಬಂದಿದೆ. ವೈದ್ಯರು ತಕ್ಷಣವೇ ಅಗ್ರಿಪಾದ ಪೊಲೀಸರಿಗೆ ಮಾಹಿತಿ ನೀಡಿದರು.
ಅಪ್ರಾಪ್ತೆಯ ಕುಟುಂಬಸ್ಥರು ಸ್ಥಿತಿವಂತರಲ್ಲದ ಕಾರಣ ಮಗಳ ಶಿಕ್ಷಣವನ್ನು ನಿಲ್ಲಿಸಿ ಆರೋಪಿಯೊಂದಿಗೆ ಅವಳನ್ನು ಮದುವೆಯಾದಳು. ಬಾಲಕಿ ಐದನೇ ತರಗತಿವರೆಗೆ ಓದಿದ್ದಾಳೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದಿದೆ.