Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಪತ್ನಿಯ ನೆರವಿನಿಂದ ಬಾಲಕಿ ಮೇಲಕಿ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದರು.
ಕೆಲವು ವರ್ಷಗಳ ಹಿಂದೆ ಬಾಲಕಿ ಪಿಯುಸಿ ಓದುತ್ತಿದ್ದಾಗ ಆಕೆಯ ಮೇಲೆ ಪಾಪದ ಹೊರೆ ಇಳಿಸುವುದಾಗಿ ಮಂಕು ಬೂದಿ ಎರಚಿ ಆರೋಪಿ ಅತ್ಯಾಚಾರವೆಸಗಿದ್ದ. ಅದಾದ ಬಳಿಕ ಅತ್ಯಾಚಾರವಸಗಿದ್ದ ಫೋಟೋಗಳನ್ನು ಸೆರೆಹಿಡಿದು ಆಕೆಯನ್ನು ಬೆದರಿಸಿ ಬಾಯಿಮುಚ್ಚಿಸಿದ್ದ.
2018 ರಲ್ಲಿ ವಿವಾಹವಾಗಿದ್ದ ಯುವತಿ ಗಂಡನ ಜೊತೆ ವಿದೇಶಕ್ಕೆ ಹೋಗಿದ್ದಳು. ಆದರೆ ಅದು ಹೇಗೋ ಆಕೆಯನ್ನು ಪತ್ತೆ ಮಾಡಿದ ಆರೋಪಿ ಬೆದರಿಸಿ ಸ್ವದೇಶಕ್ಕೆ ಕರೆಸಿಕೊಂಡು ನಿರಂತರ ಅತ್ಯಾಚಾರವೆಸಗುತ್ತಿದ್ದ. ಪರಿಣಾಮ ಆಕೆ ಗರ್ಭಿಣಿಯೂ ಆದಳು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೊನೆಗೆ ಇದೀಗ ಪತಿಗೆ ತನ್ನ ಮೇಲಾದ ದೌರ್ಜನ್ಯವನ್ನು ಹೇಳಿದ್ದಾಳೆ.
ಇದೀಗ ಸಂತ್ರಸ್ತೆ, ಪತಿ ಪೊಲೀಸರಿಗೆ ದೂರು ನೀಡಿದ್ದು, ಸ್ವಯಂಘೋಷಿತ ದೇವಮಾನವ ಮತ್ತು ಕೃತ್ಯಕ್ಕೆ ಸಹಕರಿಸಿದ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.