ಥಾಣೆ: ನರ್ಸ್ ಕೆಲಸ ಮಾಡುತ್ತಿದ್ದ 51 ವರ್ಷದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪೊಲೀಸ್ ಪೇದೆ ಆಕೆಯ ಹಣದ ದಾಹ ತೀರಿಸಲಾಗದೇ ಕೊಲೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.
39 ವರ್ಷದ ಪೊಲೀಸ್ ಪೇದೆಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. ಕೊಲೆ ಮಾಡಿದ ಬಳಿಕ ತನ್ನ ಭಾಮೈದನ ಜೊತೆ ಸೇರಿಕೊಂಡು ಆರೋಪಿ ಮೃತದೇಹ ಮಣ್ಣು ಮಾಡಲು ಯತ್ನಿಸಿದ್ದ. ಈ ವೇಳೆ ಸಿಕ್ಕಿಬಿದ್ದಿದ್ದಾನೆ.
ಮಹಿಳೆಯೊಂದಿಗೆ ಕೆಲ ಕಾಲ ಅಕ್ರಮ ಸಂಬಂಧ ಹೊಂದಿದ್ದ ಪೇದೆ ಇತ್ತೀಚೆಗೆ ಆಕೆ ಮಾಡುತ್ತಿದ್ದ ಡಿಮ್ಯಾಂಡ್ ನಿಂದ ಬೇಸತ್ತು ಹೋಗಿದ್ದ. ಈ ಕಾರಣಕ್ಕೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.