Publish Date: Wed, 19 Jan 2022 (11:32 IST)
Updated Date: Wed, 19 Jan 2022 (09:42 IST)
ನೋಯ್ಡಾ: ಮಗುವಿಗೆ ನಾಯಿ ಕಚ್ಚಿದ ಪ್ರಕರಣವೊಂದರಲ್ಲಿ ನೋಯ್ಡಾ ಪೊಲೀಸರು ಮಾಲಿಕರನ್ನು ಬಂಧಿಸಿರುವ ಘಟನೆ ನಡೆದಿದೆ. ಇದಕ್ಕೆ ಕಾರಣವೂ ಇದೆ.
10 ವರ್ಷದ ಬಾಲಕನಿಗೆ ನಾಯಿ ಕಚ್ಚಿತ್ತು. ಇದರ ಬಗ್ಗೆ ಮಾಲಿಕರಿಗೆ ಪೋಷಕರು ಪ್ರಶ್ನಿಸಿದಾಗ ಆಕ್ರೋಶಗೊಂಡ ಮಾಲಿಕರು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಹೀಗಾಗಿ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕ್ರಮ ಕೈಗೊಂಡ ಪೊಲೀಸರು ಮಾಲಿಕರ ಪೈಕಿ ಮೂವರಲ್ಲಿ ಒಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.