Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬಾಡಿಗೆ ಪಡೆಯುವಾಗ ಮನೆ ಮಾಲಿಕರು ಎಂತಹವರು ಎಂದು ತಿಳಿದುಕೊಂಡು ಬಾಡಿಗೆ ಪಡೆಯುವುದು ಎಷ್ಟು ಮುಖ್ಯ ಎನ್ನುವುದು ಈ ಘಟನೆಯಿಂದ ಅರಿವಾಗುತ್ತದೆ.
ಶ್ರೀನಗರದಲ್ಲಿ ಮನೆ ಮಾಲಿಕರೊಬ್ಬರು ಬಾಡಿಗೆ ಬಂದಿದ್ದ ಶಿಕ್ಷಕಿಗೆ ಇನ್ನಿಲ್ಲದಂತೆ ಕಿರುಕುಳ ಕೊಟ್ಟ ಪರಿಣಾಮ ಈಗ ಪೊಲೀಸರು ಆತನ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ.
ಬಾಡಿಗೆದಾರ ಮಹಿಳೆ ಹುಟ್ಟುಹಬ್ಬಕ್ಕೆ ಒಳ ಉಡುಪುಗಳ ಗಿಫ್ಟ್ ಕೊಟ್ಟಿದ್ದಲ್ಲದೆ, ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುವುದು, ಕೌಂಪೌಂಡ್ ಹಾರಿ ಬಂದು ಮನೆಗೆ ಬೀಗ ಹಾಕಿ ಪರಾರಿಯಾಗುವುದು ಇತ್ಯಾದಿ ಕಿರುಕುಳ ನೀಡುತ್ತಿದ್ದನಂತೆ. ಇದೇ ಕಾರಣಕ್ಕೆ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದು, ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.