Publish Date: Tue, 18 Jan 2022 (10:10 IST)
Updated Date: Tue, 18 Jan 2022 (10:19 IST)
ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ಬೈಕ್, ಕಾರ್ ಇತ್ಯಾದಿ ವಾಹನಗಳನ್ನು ಕದ್ದೊಯ್ಯುತ್ತಾರೆ. ಆದರೆ ಈ ಖದೀಮರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಸಿಬಿಯನ್ನೇ ಕದ್ದಿದ್ದಾರೆ.
ಸುಬ್ರಹ್ಮಣ್ಯಪುರ ಬಳಿ ಈ ಘಟನೆ ನಡೆದಿದೆ. ಚಾಲಕ ರಾತ್ರಿ ರಸ್ತೆ ಬದಿ ಜೆಸಿಬಿ ನಿಲ್ಲಿಸಿ ಮನೆಗೆ ತೆರಳಿದ್ದ. ಬೆಳಗಿನ ಜಾವ ನೋಡುವಾಗ ಜೆಸಿಬಿಯೇ ನಾಪತ್ತೆಯಾಗಿತ್ತು.
ಹೀಗಾಗಿ ಯಾರೋ ಖದೀಮರು ಜೆಸಿಬಿಯನ್ನು ಕದ್ದಿರುವುದು ಗೊತ್ತಾಗಿದೆ. ತಕ್ಷಣವೇ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಜೆಸಿಬಿಗಾಗಿ ಹುಡುಕಾಟ ನಡೆಸಿದ್ದಾರೆ.
Krishnaveni K
Publish Date: Tue, 18 Jan 2022 (10:10 IST)
Updated Date: Tue, 18 Jan 2022 (10:19 IST)