ಬೆಂಗಳೂರು: ಆಪ್ ಆಧಾರಿತ ಕ್ಯಾಬ್ ಗಳು ಪ್ರಯಾಣಿಕರಿಂದ ನಿಯಮ ಮೀರಿ ಹಣ ವಸೂಲಾತಿ ಮಾಡುತ್ತಿವೆ ಎಂಬ ದೂರಿನ ಹಿನ್ನಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿತ್ತು.
ಸಾರಿಗೆ ಇಲಾಖೆ ಅಧಿಕಾರಿಗಳು ಓಲಾ, ಉಬರ್ ಸೇರಿದಂತೆ ಆಪ್ ಆಧಾರಿತ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಓಲಾ, ಉಬರ್ ಬೆಲೆಯಲ್ಲಿ ದಿಡೀರ್ ಇಳಿಕೆಯಾಗಿದೆ.
ಈ ಮೊದಲು 2 ಕಿ.ಮೀ. ಗಿಂತ ಕಡಿಮೆ ದೂರ ಕ್ರಮಿಸಲು ಆಟೋಗಳು 100 ರೂ. ಮೊತ್ತ ತೋರಿಸುತ್ತಿತ್ತು. ಆದರೆ ಈಗ ಸರ್ಕಾರದ ಕ್ರಮಕ್ಕೆ ಮುಂದಾದ ಬಳಿಕ ಬರೋಬ್ಬರಿ 20-40 ರೂ.ಗಳಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಉದಾಹರಣೆಗೆ ಮೊದಲು 100 ರೂ. ತೋರಿಸುತ್ತಿದ್ದ ತಾಣಕ್ಕೆ ಈಗ 80 ರಿಂದ 60 ರೂ.ವರೆಗೆ ತೋರಿಸುತ್ತಿದೆ. ಇದರಿಂದ ಆಪ್ ಆಧಾರಿತ ಆಟೋ ಬಳಕೆದಾರರು ಸಮಾಧಾನಪಡುವಂತಾಗಿದೆ.
-Edited by Rajesh Patil