Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಓಲಾ, ಊಬರ್ ಆ್ಯಪ್ ಆಧಾರಿತ ಆಟೋಟೋಪಕ್ಕೆ ಸರ್ಕಾರ ಮೂಗುದಾರ ಹಾಕಿದೆ. ಪ್ರಯಾಣಿಕರು, ಆಟೋ ಚಾಲಕರಿಂದ ಸುಲಿಗೆ ಮಾಡ್ತಿದ್ದ ಓಲಾ, ಊಬರ್ ಗೆ ಸರ್ಕಾರ ಕೊಂಚ ಬಿಸಿ ಮುಟ್ಟಿಸಿದೆ.
ನಾಳೆಯಿಂದ ಓಲಾ, ಊಬರ್ ಆಟೋ ಓಡಾಟ ಬಂದ್ ಇರಲಿದೆ. ಓಲಾ, ಊಬರ್ ಆಧಾರಿತ ಆಟೋಗಳು ರಸ್ತೆಗಿಳಿದ್ರೆ ನಾಳೆಯಿಂದ ಭಾರೀ ಮೊತ್ತದ ದಂಡ ಬೀಳಲಿದೆ. ಆದರೆ ದಂಡದ ಹೊರೆ ಆಪ್ ಕಂಪನಿಗಳ ಮೇಲಿರಲಿದೆ.
ಆ್ಯಪ್ ಆಧಾರಿತ ಆಟೋಗಳು ಕಂಡ್ರೆ ಕಂಪನಿಗೆ 5 ಸಾವಿರ ದಂಡ ಬೀಳಲಿದೆ. ಆಟೋ ಚಾಲಕರ ಮೇಲೆ ಯಾವುದೇ ಕಾರಣಕ್ಕೂ ದಂಡ ವಿಧಿಸಲ್ಲ. ಇದಕ್ಕಂತನೇ ಸಹಾಯವಾಣಿ ಕೂಡ ತೆರೆಯಲಾಗಿದೆ. 2021ರಲ್ಲೇ ಲೈಸನ್ಸ್ ರದ್ದಾಗಿದ್ದರೂ ಓಲಾ, ಊಬರ್ ರೂಲ್ಸ್ ಬ್ರೇಕ್ ಮಾಡಿರೋದು ಸಾರಿಗೆ ಇಲಾಖೆ ಕಣ್ಣು ಕೆಂಪಾಗಿಸಿದೆ.
ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ , ಕೊನೆಗೂ ಆಟೋಗಳಿಗೆ ದರ ನಿಗದಿ ಮಾಡಿದೆ. 2 ಕಿ.ಮೀ 30ರೂ. ದರ ನಿಗದಿ ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ್ರೆ ಕ್ರಮ ಅಂತ ಸಾರಿಗೆ ಇಲಾಖೆ ಎಚ್ಚರಿಸಿದೆ. ಅಲ್ಲದೆ ಜಿಎಸ್ಟಿ ದರ ಕೂಡ ಸೇರಲಿದೆ.