Publish Date: Wed, 12 Oct 2022 (15:14 IST)
Updated Date: Wed, 12 Oct 2022 (15:16 IST)
ಗದಗ : ಸಾರಿಗೆ ಅಧಿಕಾರಿಗಳ ನೋಟಿಸ್ಗೆ ಕ್ಯಾರೆ ಎನ್ನದೇ ಹೋದ್ರೆ ಅಂತಹ ವಿಚಾರಕ್ಕೆ ಶ್ರೀರಾಮುಲು ಜಗ್ಗಲ್ಲ. ಕಾನೂನು ಬಾಹಿರ ಕೆಲಸ ಮಾಡಿದ್ರೆ ಸಹಿಸುವುದಿಲ್ಲ.
ಯಾರೇ ಆದ್ರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವಕಾಶ ಸಿಕ್ಕರೆ ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
2021 ಮಾರ್ಚ್ನಲ್ಲಿ ಓಲಾ, ಉಬರ್ ಲೈಸೆನ್ಸ್ ಅವಧಿ ಮುಗಿದಿದೆ. ಅವಧಿ ಮುಗಿದ್ರು ಓಲಾ, ಉಬರ್ ಆ್ಯಪ್ ಮುಂದುವರಿದಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುತ್ತಿದ್ದೇನೆ. ಅವಧಿ ಮುಗಿದ್ರೂ ಗಾಡಿ ಓಡಾಡಿದ್ರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.