ನವದೆಹಲಿ : ಸೌದಿ ವೀಸಾಗಾಗಿ ಅರ್ಜಿ ಸಲ್ಲಿಸಲು ಭಾರತೀಯರು ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ನೀಡುವ ಅಗತ್ಯವಿಲ್ಲ.
ಸೌದಿ ಅರೇಬಿಯಾ ಮತ್ತು ಭಾರತ ಗಣರಾಜ್ಯದ ನಡುವಿನ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ದೃಷ್ಟಿಯಿಂದ ಭಾರತೀಯರಿಗೆ ವೀಸಾಗಾಗಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರದ ಅಗತ್ಯವನ್ನು ತೆಗೆದುಹಾಕಲಾಗಿದೆ ಎಂದು ಭಾರತದಲ್ಲಿನ ಸೌದಿ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ವೀಸಾಕ್ಕಾಗಿ ಪೋಲೀಸ್ ಕ್ಲಿಯರೆನ್ಸ್ ಅಗತ್ಯತೆ ನಿಯಮ ತೆಗೆದಿರುವುದು ತ್ವರಿತ ಅರ್ಜಿ ಪ್ರಕ್ರಿಯೆ, ಪ್ರವಾಸ ಸಂಸ್ಥೆಗಳಿಂದ ಸುಲಭ ನಿರ್ವಹಣೆ ಮತ್ತು ಪ್ರವಾಸಿಗರು ದಾಖಲೆ ಒದಗಿಸುವುದಕ್ಕಾಗಿ ಪಡುವ ಪ್ರಯಾಸ ತಪ್ಪುವುದಲ್ಲದೇ ಅನೇಕ ಪ್ರಯೋಜನವಾಗಲಿದೆ.