ಕೊಲೊಂಬೊ : ದೇಶದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ದ್ವೀಪ ರಾಷ್ಟ್ರವು ಭಾರತೀಯ ಉದ್ಯಮಿಗಳಿಗೆ ಶ್ರೀಲಂಕಾ ಸಚಿವ ಧಮ್ಮಿಕಾ ಪೆರೆರಾ ಅವರು 5 ವರ್ಷಗಳ ವೀಸಾಗಳನ್ನು ಹಸ್ತಾಂತರಿಸಿದರು.
ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಶ್ರೀಲಂಕಾದಲ್ಲಿ ಭಾರತೀಯ ಉದ್ಯಮಿಗಳಿಗೆ 5 ವರ್ಷಗಳ ವೀಸಾಗಳನ್ನು ಹಸ್ತಾಂತರಿಸುತ್ತಿದ್ದಾರೆ. ಇದು ವ್ಯಾಪಾರ ಮಾಡಲು ಸುಲಭತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಹೂಡಿಕೆಯನ್ನು ಉತ್ತೇಜಿಸುವಲ್ಲಿ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಈ ಹಿಂದೆ ಕೊಲೊಂಬೊದಲ್ಲಿರುವ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಶ್ರೀಲಂಕಾದ ವ್ಯಾಪಾರ ಸಚಿವರನ್ನು ಭೇಟಿಯಾಗಿ ವ್ಯಾಪಾರದ ವಿವಿಧ ಅಂಶಗಳ ಕುರಿತು ಚರ್ಚಿಸಿದ್ದರು.
ವ್ಯಾಪಾರ ಸಚಿವ ನಳಿನ್ ಫೆರ್ನಾಂಡೋ ಅವರನ್ನು ಹೈಕಮಿಷನರ್ ಭೇಟಿ ಮಾಡಿದರು. ಅವರು ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸುವುದು, ಭಾರತ ಮತ್ತು ಶ್ರೀಲಂಕಾ ನಡುವಿನ ವ್ಯಾಪಾರ ಸಂಪರ್ಕವನ್ನು ಸುಲಭಗೊಳಿಸಲು ವೇದಿಕೆಗಳನ್ನು ರಚಿಸುವಂತಹ ದ್ವಿರಾಷ್ಟ್ರೀಯ ವ್ಯಾಪಾರದ ವಿವಿಧ ಅಂಶಗಳ ಕುರಿತು ಚರ್ಚಿಸಿರುವ ಬಗ್ಗೆ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.