ಮುಂಬೈ : ಭಾರತೀಯ ನಾಗರಿಕರಿಗೆ ವೀಸಾಗಳ ಶುಲ್ಕ ಕಡಿತಗೊಳಿಸಿರುವುದಾಗಿ ಮುಂಬೈನಲ್ಲಿರುವ ಜರ್ಮನ್ ರಾಯಭಾರ ಕಚೇರಿಯು ಘೋಷಿಸಿದೆ.
ಹೊಸ ನಿಯಮಗಳ ಅನ್ವಯ ಭಾರತೀಯರಿಗೆ ಅಲ್ಪಾವಧಿ ವೀಸಾ ಹಾಗೂ ನ್ಯಾಷನಲ್ ವೀಸಾಗಳ ಶುಲ್ಕವನ್ನು ಕಡಿಮೆ ಮಾಡಿದೆ. ಅಲ್ಪಾವಧಿ ಹಾಗೂ ನ್ಯಾಷನಲ್ ವೀಸಾಗಳು ಗರಿಷ್ಠ 90 ದಿನಗಳ ವರೆಗೆ ಉಳಿಯಲು ಅನುಮತಿಸುತ್ತದೆ.
ಅಲ್ಪಾವಧಿ ವೀಸಾಗೆ ವಯಸ್ಕರಿಗೆ 6,400 ರೂ.(80 ಡಾಲರ್), ಅಪ್ರಾಪ್ತರಿಗೆ 3,200 ರೂ. (40 ಡಾಲರ್) ಇರಲಿದ್ದು, ನ್ಯಾಷನಲ್ ವೀಸಾಕ್ಕೆ ವಯಸ್ಕರಿಗೆ 6 ಸಾವಿರ ರೂ (75 ಡಾಲರ್) ಹಾಗೂ ಅಪ್ರಾಪ್ತರಿಗೆ 3 ಸಾವಿರ ರೂ. (37.50 ಡಾಲರ್) ಗಳಷ್ಟು ಶುಲ್ಕ ಇರಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.