Publish Date: Thu, 11 Feb 2021 (10:50 IST)
Updated Date: Thu, 11 Feb 2021 (10:51 IST)
ಮೀರತ್: ಮನೆಗೆಲಸದಾಕೆಯ ಮೇಲೆ ಹಲ್ಲೆ ನಡೆಸಿ, ಕೂಡಿಹಾಕಿದ್ದಲ್ಲದೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ಮೀರತ್ ನಲ್ಲಿ ನಡೆದಿದೆ.
ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಯುವತಿಗೆ ಆಕೆಯ ಸಂಬಂಧಿಕರು ಈ ಮನೆಯಲ್ಲಿ ಕೆಲಸ ಕೊಡಿಸಿದ್ದರು. ಆದರೆ ಮನೆಯಲ್ಲಿ ತನ್ನ ಹದಿಹರೆಯದ ಪುತ್ರ, ಪತ್ನಿ ಇಲ್ಲದ ಸಮಯ ನೋಡಿಕೊಂಡು ಮನೆ ಯಜಮಾನ ಆಕೆಯ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಕೂಡಿಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಕೊನೆಗೂ ಅದು ಹೇಗೋ ಆತನಿಂದ ತಪ್ಪಿಸಿಕೊಂಡ ಯುವತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.