ಲಕ್ನೋ: ಕ್ಷುಲ್ಲುಕ ಕಾರಣಕ್ಕೆ ಜಗಳ ತೆಗೆದು ವ್ಯಕ್ತಿಯೊಬ್ಬ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿ ಮತ್ತು 5 ವರ್ಷದ ಮಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆರೋಪಿ ಕ್ಯಾನ್ಸರ್ ರೋಗಿಯಾಗಿದ್ದ. ಇದಕ್ಕೂ ಮೊದಲು ಎರಡು ಮದುವೆಯಾಗಿದ್ದ. ಆದರೆ ಈತನ ರೋಗ ಅರಿತು ಇಬ್ಬರೂ ಪತ್ನಿಯರು ಆತನಿಂದ ದೂರವಾಗಿದ್ದರು. ಎರಡನೇ ಪತ್ನಿಯ ಮಗಳು ಆತನ ಜೊತೆಗಿದ್ದಳು. ಲಾಕ್ ಡೌನ್ ವೇಳೆ ಆತ ಮೂರನೇ ಬಾರಿಗೆ ಮದುವೆಯಾಗಿದ್ದ. ಈಗ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಭಾನುವಾರ ರಾತ್ರಿ ದಂಪತಿ ನಡುವೆ ಕ್ಲುಲ್ಲುಕ ಕಾರಣಕ್ಕೆ ಕಲಹವಾಗಿದ್ದು, ಇದೇ ಸಿಟ್ಟಿನಲ್ಲಿ ಪತ್ನಿ, ಮಗಳನ್ನು ಹತ್ಯೆ ಮಾಡಿದ್ದಾನೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.