ನವದೆಹಲಿ: ಕೇಂದ್ರ ಮತ್ತು ಟ್ವಿಟರ್ ನಡುವಿನ ತಿಕ್ಕಾಟದ ಲಾಭವಾಗಿರುವುದು ಬೆಂಗಳೂರು ಮೂಲದ ಕೂ ಸಂಸ್ಥೆಗೆ. ಈ ಸ್ವದೇಶೀ ಸಾಮಾಜಿಕ ಜಾಲತಾಣಕ್ಕೆ ಈಗ ಜನಪ್ರಿಯತೆ ಹೆಚ್ಚಿದೆ.
ಟ್ವಿಟರ್ ಕೇಂದ್ರದ ನಿರ್ದೇಶನ ಪಾಲಿಸದೇ ಇರುವ ಕಾರಣಕ್ಕೆ ಈ ಸಾಮಾಜಿಕ ಜಾಲತಾಣದಿಂದ ಕೆಲವರು ವಿಮುಖರಾಗುತ್ತಿದ್ದಾರೆ. ಸ್ವತಃ ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂ ನಲ್ಲಿ ಖಾತೆ ತೆರೆದಿದ್ದಾರೆ. ಇವರ ಹಿಂದೆಯೇ ಕೇಂದ್ರದ ಕೆಲವು ಸಚಿವಾಲಯಗಳೂ ಕೂನಲ್ಲಿ ಖಾತೆ ತೆರೆದಿವೆ. ಹೀಗಾಗಿ ಈ ದೇಸೀ ಆಪ್ ಈಗ ಜನಪ್ರಿಯವಾಗುತ್ತಿದೆ. ವಿಶೇಷವೆಂದರೆ ಈ ಆಪ್ ನ್ನು ಅಭಿವೃದ್ಧಿಪಡಿಸಿರುವುದು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಂಸ್ಥೆ. ಒಂದು ವೇಳೆ ಇದು ಜನಪ್ರಿಯವಾದರೆ ಬೆಂಗಳೂರಿಗೆ ಹೆಮ್ಮೆಯ ವಿಷಯವಾಗಲಿದೆ.