Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಸಿಸ್‍ ಸ್ಫೋಟಕ ಮಾಹಿತಿ ತನಿಖೆ

ಐಸಿಸ್‍ ಸ್ಫೋಟಕ ಮಾಹಿತಿ ತನಿಖೆ
ತಿರುವನಂತಪುರಂ , ಸೋಮವಾರ, 22 ಆಗಸ್ಟ್ 2022 (12:41 IST)
ತಿರುವನಂತಪುರಂ : ಜಗತ್ತಿನಾದ್ಯಂತ ಭೀಕರ ದಾಳಿಯ ಮೂಲಕ ಹಲವರ ಸಾವು-ನೋವಿಗೆ ಕಾರಣವಾಗಿರುವ ಐಸಿಸ್ ಸಂಘಟನೆಯಲ್ಲಿ ಮೊದಲ ಆತ್ಮಾಹುತಿ ದಾಳಿಕೋರನಾಗಿ ಕೆಲಸ ಮಾಡಿದಾತ ಬೆಂಗಳೂರಿನಲ್ಲಿ ನೆಲೆಸಿದ್ದ ಟೆಕ್ಕಿ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
 
ಮೊದಲ ಆತ್ಮಾಹುತಿ ದಾಳಿಕೋರ ಎಂಬ ಕುಖ್ಯಾತಿ ಹೊಂದಿದಾತ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ವ್ಯಕ್ತಿಯಾಗಿದ್ದ. ಈತನನ್ನು ಹೊಗಳಿ ಐಸಿಸ್ನ ಖೊರಾಸನ್ ಘಟಕ ತನ್ನ ಮುಖವಾಣಿಯಾದ ವಾಯ್ಸ್ ಅಫ್ ಖೊರಾಸನ್ನಲ್ಲಿ ಲೇಖನ ಪ್ರಕಟಿಸಿದೆ.

ಲಿಬಿಯಾದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಹಲವರನ್ನು ಕೊಂದಿದ್ದ ಎಂಜಿನಿಯರ್ ಬಗ್ಗೆ ಲೇಖನ ಪ್ರಕಟಿಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಾಹಿತಿ ಪಡೆದು ತನಿಖೆ ಆರಂಭಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

22 ಶಾಲೆಗಳಿಗೆ ರಜೆ ಘೋಷಣೆ ?