Publish Date: Tue, 14 Jun 2022 (14:48 IST)
Updated Date: Tue, 14 Jun 2022 (14:51 IST)
ಬಿಜೆಪಿಯಿಂದ ಉಚ್ಛಾಟಿತ ನಾಯಕಿ ನುಪುರ್ ಶರ್ಮ ಪ್ರವಾದಿ ನಿಂದನೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹ್ಯಾಕರ್ಸ್ ಭಾರತದ ಮೇಲೆ ಸರಣಿ ಸೈಬರ್ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ.
ಡ್ರ್ಯಾಗನ್ ಫೋರ್ಸ್ ಎಂಬ ಗುಂಪು ಸಾಮಾಜಿಕ ಜಾಲತಾಣದಲ್ಲಿ ಸೈಬರ್ ದಾಳಿಗೆ ಕರೆ ಕೊಟ್ಟಿದೆ. ವಿಶ್ವದ ಎಲ್ಲಾ ಮುಸ್ಲಿಂ ಹ್ಯಾಕರ್ಸ್ ಒಂದಾಗಬೇಕು ಎಂದು ಕರೆ ನೀಡಿದೆ.
ಭಾರತದ ವಿರುದ್ಧ ಅಭಿಯಾನ ಆರಂಭಿಸಲು ಮಾನವ ಹಕ್ಕು ಸಂಘಟನೆಗಳು. ಕಾರ್ಯಕರ್ತರು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಬೇಕಿದೆ. ವಾಸ್ತವವಾಗಿ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಿ ಮತ್ತು ನಿಜವಾದ ಉಗ್ರರು, ಕೋಮು ಗಲಭೆ ಸೃಷ್ಟಿಸುತ್ತಿರುವವನ್ನು ಬಯಲಿಗೆ ಎಳೆಯಬೇಕಾಗಿದೆ ಎಂದು ಕರೆ ನೀಡಿದೆ.
ಇದೇ ವೇಳೆ ದೇವಸ್ಥಾನ ಇದೆ ಎಂದು ಮಸೀದಿಗಳನ್ನು ತೆರವುಗೊಳಿಸುವ ಅಭಿಯಾನ ನಡೆಯುತ್ತಿರುವ ಬಗ್ಗೆ ಮುಸ್ಲಿಂ ಸಂಘಟನೆಗಳು ಟಿವಿಯಲ್ಲಿ ಚರ್ಚೆ ನಡೆಸಬಾರದು ಎಂದು ಮುಸ್ಲಿಂ ಸಂಘಟನೆಗಳಿಗೆ ಸೂಚಿಸಿದೆ.