Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

1 ಕೋಟಿ ಹುದ್ದೆ ಖಾಲಿ ಇವೆ: ಪ್ರಧಾನಿ ಮೋದಿಗೆ ವರುಣ್ ಗಾಂಧಿ ಟಾಂಗ್

1 ಕೋಟಿ ಹುದ್ದೆ ಖಾಲಿ ಇವೆ: ಪ್ರಧಾನಿ ಮೋದಿಗೆ ವರುಣ್ ಗಾಂಧಿ ಟಾಂಗ್
bengaluru , ಮಂಗಳವಾರ, 14 ಜೂನ್ 2022 (14:37 IST)

ದೇಶದಲ್ಲಿ 1 ಕೋಟಿ ಹುದ್ದೆಗಳು ಖಾಲಿ ಇವೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ 18 ತಿಂಗಳಲ್ಲಿ 10 ಲಕ್ಷ ಹುದ್ದೆ ನೇಮಕಾತಿ ಸೂಚನೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಮಂಗಳವಾರ ಬೆಳಿಗ್ಗೆ ಪ್ರಧಾನಿ ಟ್ವೀಟ್ ಮಾಡಿ 10 ಲಕ್ಷ ಹುದ್ದೆ ಸೃಷ್ಟಿಗೆ ಆದೇಶ ನೀಡಲಾಗಿದೆ ಎಂದು ಹೇಳಿಕೊಂಡಿದ್ದರು. ಕಳೆದ ಕೆಲವು ಸಮಯದಿಂದ ತಮ್ಮದೇ ಪಕ್ಷದ ನೀತಿಗಳನ್ನು ಬಹಿರಂಗವಾಗಿ ಖಂಡಿಸುತ್ತಿರುವ ಸಂಸದ ವರುಣ್ ಗಾಂಧಿ, ಟ್ವೀಟ್ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.

ವರುಣ್ ಗಾಂಧಿ ಟ್ವೀಟ್ ಮಾಡಿ, ಧನ್ಯವಾದಗಳು ಪ್ರಧಾನಿ ಮೋದಿ ಅವರೇ, ಯುವ ಸಮುದಾಯದ ನೋವು ಹಾಗೂ ಭಾವನೆಯನ್ನು ಅರ್ಥ ಮಾಡಿಕೊಂಡು ಉದ್ಯೋಗ ಸೃಷ್ಟಿ ಮಾಡುತ್ತಿದ್ದೀರಿ. ನಾವು  ಖಾಲಿ ಇರುವ 1 ಕೋಟಿ ಉದ್ಯೋಗ ಸೃಷ್ಟಿ ಮಾಡಿದರೆ ಇದಕ್ಕೊಂದು ಅರ್ಥ ಬರುತ್ತದೆ. ಇದರಿಂದ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ನೀವು ನೀಡಿದ ಭರವಸೆ ಈಡೇರಿಸಲು ಒಂದು ಹೆಜ್ಜೆ ಇಟ್ಟಂತಾಗುತ್ತದೆ ಎಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ ಸೂಚನೆ