ದುಬೈ : ಭಾರತದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತನ್ನು 4 ತಿಂಗಳು ಅಮಾನತುಗೊಳಿಸುವಂತೆ ಸಂಯುಕ್ತ ಅರಬ್ ಒಕ್ಕೂಟವು (ಯುಎಇ) ಆದೇಶಿಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ Wಂಒ ವರದಿ ಮಾಡಿದೆ.
ಗಲ್ಫ್ ರಾಷ್ಟ್ರಗಳ ಆರ್ಥಿಕ ಸಚಿವಾಲಯವು ಜಾಗತಿಕ ವ್ಯಾಪಾರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಕ್ರಮವಹಿಸಿದೆ. ಆದರೆ ದೇಶೀಯ ಬಳಕೆಗಾಗಿ ಯುಎಇಗೆ ಗೋಧಿ ರಫ್ತನ್ನು ಭಾರತ ಅನುಮೋದಿಸಿದೆ.
ಭಾರತವು ಮೇ 14 ರಂದು ಗೋಧಿ ರಫ್ತನ್ನು ನಿಷೇಧಿಸಿತ್ತು. ಈಗಾಗಲೇ ನೀಡಲಾದ ಸಾಲದ ಪತ್ರಗಳು (ಐಅ) ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಯಸುವ ದೇಶಗಳಿಗೆ ಬೆಂಬಲ ನೀಡಿದೆ. ಅಂದಿನಿಂದ 4,69,202 ಟನ್ ಗೋಧಿಯ ಸಾಗಣೆಗೆ ಅನುಮತಿ ನೀಡಿದೆ.
ಭಾರತದ ಗೋಧಿ ರಫ್ತಿಗೆ ಅಮಾನತು ವಿಧಿಸಿದ ದಿನದ ಮೊದಲೇ ಯುಎಇಗೆ ಬಂದಿರುವ ಭಾರತೀಯ ಗೋಧಿಯನ್ನು ರಫ್ತು ಮಾಡಲು ಬಯಸುವ ಕಂಪನಿಗಳು ಮೊದಲು ಆರ್ಥಿಕ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.