Publish Date: Sat, 11 Jun 2022 (17:38 IST)
Updated Date: Sat, 11 Jun 2022 (17:39 IST)
ಮುಂಬೈ: ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದ ಮಹಿಳಾ ಕ್ರಿಕೆಟ್ ತಾರೆ ಮಿಥಾಲಿ ರಾಜ್ ತಮ್ಮ ಮುಂದಿನ ನಡೆ ಬಗ್ಗೆ ಹೇಳಿದ್ದಾರೆ.
ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಸಾಮಾನ್ಯವಾಗಿ ಆಟಗಾರರು ಕಾಮೆಂಟರಿ ಅಥವಾ ಕೋಚಿಂಗ್ ಹುದ್ದೆ ಆಯ್ಕೆ ಮಾಡುತ್ತಾರೆ. ಆದರೆ ಮಿಥಾಲಿ ರಾಜ್ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಬಯಸುವುದಾಗಿ ಹೇಳಿದ್ದಾರೆ.
22 ವರ್ಷಗಳ ವೃತ್ತಿ ಬದುಕಿನಲ್ಲಿ 333 ಪಂದ್ಯಗಳನ್ನಾಡಿರುವ ಮಿಥಾಲಿ ತಮ್ಮ ಅನುಭವ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಸರಿಯಾಗಿ ಬಳಕೆಯಾಗಬಹುದು ಎಂದಿದ್ದಾರೆ. ಮಹಿಳೆಯೊಬ್ಬರು ಬಿಸಿಸಿಐ ಹುದ್ದೆಯಲ್ಲಿದ್ದರೆ ಮಹಿಳಾ ಕ್ರಿಕೆಟ್ ಸುಧಾರಣೆಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.