ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮ ಘೋಷಿಸಲು ವಿಶ್ವಸಂಸ್ಥೆ ಮಂಡಿಸಿದ್ದ ಗೊತ್ತುವಳಿಗೆ ಭಾರತ ಗೈರು ಹಾಜರಾಗಿರುವುದನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಪಾಲೆಸ್ತೇನ್ ಗೆ ತನ್ನ ಸಂಪೂರ್ಣ ಬೆಂಬಲ ಹಾಗೂ ಸಹಕಾರವನ್ನು ನೀಡುತ್ತದೆ ಎಂದಿರುವ ಸೋನಿಯಾಗಾಂಧಿ, ಇಸ್ರೇಲ್ ನಲ್ಲಿ ಶಾಂತಿ ನೆಲೆಸಬೇಕೆಂಬುದು ನಮ್ಮ ಆಶಯವಾಗಿದೆ ಎಂದಿದ್ದಾರೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಖಂಡನಾರ್ಹ ಎಂದು ನಿಸ್ಸಂಶಯವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ ಇದರಿಂದ ಇಸ್ರೇಲ್ ಮುಂದುವರೆಸಿರುವ ದಾಳಿಯಲ್ಲಿ ನಿರಪರಾಧಿಗಳು, ಮುಗ್ದರು ಅನ್ಯಾಯವಾಗಿ ಬೆಲೆ ತೆರುವಂತಾಗಿದೆ ಎಂದು ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಾನವೀಯತೆಯು ವಿಚಾರಣೆಯಲ್ಲಿದೆ ಎಂದು ನುಡಿದಿರುವ ಸೋನಿಯಾ ಗಾಂಧಿ, ಯುದ್ಧ ಕೃತ್ಯಗಳನ್ನು ನಿಲ್ಲಿಸಲು ಶಕ್ತಿಯುತರು ಒಗ್ಗಟ್ಟಾಗಿ,ಪ್ರಯತ್ನಿಸಬೇಕಿದೆ ಎಂದಿರುವ ಸೋನಿಯಾ ಗಾಂಧಿ, ಇಸ್ರೇಲ್ ಮೇಲೆ ಅಮಾನವೀಯ ದಾಳಿ ನಡೆದಿರುವುದು ತಪ್ಪು. ಆದರೆ ಈಗ ಇಸ್ರೇಲ್ ಅದೇ ರೀತಿಯ ಅಮಾನವೀಯ ದಾಳಿಯನ್ನು ಪ್ಯಾಲೆಸ್ತೇನ್ ಮೇಲೆ ನಡೆಸುತ್ತಿದೆ ಎಂದಿದ್ದಾರೆ.