ದಿನಸಿ ಸಾಮಗ್ರಿಗಳನ್ನು ಡೆಲವರಿ ಮಾಡಲು ಬಂದಿದ ಯುವಕನೊಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸುಮಿತ್ ಸಿಂಗ್ ನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂದಿಸಿದ್ದಾರೆ. ಅಪಾರ್ಟ್ ಮೆಂಟ್ನಲ್ಲಿ ವಾಸವಾಗಿದ್ದ 23 ವರ್ಷದ ಯುವತಿ ಆನ್ ಲೈನ್ ಮೂಲಕ ಮನೆಗೆ ದಿನಸಿ ಆರ್ಡರ್ ಮಾಡಿದ್ದರು.
ಮನೆಗೆ ಸಾಮಗ್ರಿಗಳನ್ನು ಡೆಲವರಿ ಮಾಡಲು ಬಂದ ಸುಮಿತ್ ಸಿಂಗ್ ಆಕೆ ಒಬ್ಬರೇ ಇರುವುದನ್ನು ಗಮನಿಸಿ ಅತ್ಯಾಚಾರವೆಸಗಿದ್ದ.ಬಳಿಕ ಸಂತ್ರಸ್ತೆ ನೀಡಿದ ದೂರನ್ನಾಧರಿಸಿ ಪೊಲೀಸರು ಆತನನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರ ಪಿಸ್ತೂಲನ್ನು ಕಸಿದು ಪರಾರಿಯಾಗಲು ಯತ್ನಿಸಿದ್ದ.ಈ ವೇಳೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.