Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಇಸ್ರೇಲ್‌ನಲ್ಲಿರುವ ಕನ್ನಡಿಗರ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.. ಇಸ್ರೇಲ್ನಲ್ಲಿ ಸಿಲುಕಿರುವ ಬನಹಟ್ಟಿಯ ಪೂಜಾ ಕುಟುಂಬಸ್ಥರಿಗೆ ಸಿದ್ದರಾಮಯ್ಯ ಅವರು ಧೈರ್ಯ ತುಂಬಿದರು. ನಿನ್ನೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪೂಜಾ ಕುಟುಂಬಸ್ಥರಿಗೆ ಧೈರ್ಯ ಹೇಳುವಂತೆ ಮನವಿ ಮಾಡಿದರು. ತಮ್ಮ ಮೊಬೈಲ್‌ನಲ್ಲೇ ಪೂಜಾ ತಾಯಿಗೆ ಕರೆ ಮಾಡಿಕೊಟ್ಟು ಮಾತನಾಡಿಸಿದರು. ಪೂಜಾ ತಾಯಿಯೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪೂಜಾ ಅವರೊಂದಿಗೆ ಮಾತನಾಡಿದ್ದೇನೆ, ಅವರು ಸುರಕ್ಷಿತವಾಗಿದ್ದಾರೆ. ನೀವು ಯಾವುದೇ ಆತಂಕಕ್ಕೊಳಗಾಗಬೇಡಿ ಎಂದು ಪೂಜಾ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಇನ್ನು ಸಚಿವ ಆರ್ ಬಿ ತಿಮ್ಮಾಪೂರ ಅವರು ಕೂಡ ಪೂಜಾ ಹಾಗೂ ಅವರ ಕುಟುಂಬಸ್ಥರೊಂದಿಗೆ ಮಾತನಾಡಿದರು. ಸಚಿವ ತಿಮ್ಮಾಪೂರ ಅವರು ಪೂಜಾ ಅವರೊಂದಿಗೆ ಮಾತನಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಸದ್ಯ ನನಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಸುರಕ್ಷಿತವಾಗಿದ್ದೇನೆ ಎಂದು ಪೂಜಾ ಅವರು ಮಾಹಿತಿ ನೀಡಿದ್ದಾರೆ. ಏನೇ ಇದ್ದರೂ ತಮ್ಮನ್ನು ಸಂಪರ್ಕಿಸಿ, ಸರ್ಕಾರ ತಮ್ಮ ಜೊತೆಗಿರಲಿದೆ ಎಂದು ಸಚಿವ ತಿಮ್ಮಾಪೂರ ಅವರು ಧೈರ್ಯ ತುಂಬಿದ್ರು