Publish Date: Thu, 08 Oct 2020 (11:20 IST)
Updated Date: Thu, 08 Oct 2020 (11:22 IST)
ಲಕ್ನೋ: ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿಯ ಸಾವಿಗೆ ಕಾರಣ ಅತ್ಯಾಚಾರವಲ್ಲ, ಆಕೆಯನ್ನು ಕೊಂದಿದ್ದು ಪ್ರಮುಖ ಆರೋಪಿ ಎನಿಸಿಕೊಂಡಿರುವ ಸಂದೀಪ್ ಅಲ್ಲ ಎಂದು ಆರೋಪಿಯ ಸ್ನೇಹಿತ ಹೇಳಿದ್ದಾನೆ.
ಯುವತಿಯ ಸಾವಿಗೆ ಆಕೆಯ ಮನೆಯವರೇ ಕಾರಣ. ಸಂದೀಪ್ ಜತೆಗೆ ಆಕೆಗೆ ಪ್ರೇಮ ಸಂಬಂಧವಿತ್ತು. ಇದು ಆಕೆಯ ಮನೆಯವರಿಗೆ ಇಷ್ಟವಿರಲಿಲ್ಲ. ಆಕೆಯನ್ನು ಭೇಟಿಯಾಗಲು ಬಂದಾಗ ಮನೆಯವರೇ ಆಕೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ನಾವು ನಿರಪರಾಧಿಗಳು ಎಂದು ಪ್ರಮುಖ ಆರೋಪಿ ಸಂದೀಪ್ ಸಿಂಗ್ ಸೇರಿದಂತೆ ನಾಲ್ವರು ಆಪಾದಿತರು ಸಹಿ ಹಾಕಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇದು ಪ್ರಕರಣದ ತನಿಖೆಗೆ ಇನ್ನೊಂದು ಆಯಾಮ ನೀಡಿದೆ.