Publish Date: Wed, 07 Oct 2020 (11:09 IST)
Updated Date: Wed, 07 Oct 2020 (16:48 IST)
ನವದೆಹಲಿ: ಮಾಲಿಕನೇ ಕೆಲಸದಾಕೆಯ ಮೇಲೆ ಮಾನಭಂಗ ಮಾಡಿದ ಘಟನೆ ಗುಜರಾತ್ ನ ಕಛ್ ನಲ್ಲಿ ನಡೆದಿದೆ. ತನ್ನ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ 22 ವರ್ಷದ ಕೆಲಸದಾಕೆಯ ಮೇಲೆ ಮಾಲಿಕ ಈ ಕೃತ್ಯವೆಸಗಿದ್ದಾನೆ.
ಈ ಬಗ್ಗೆ ಸಂತ್ರಸ್ತೆ ಹಾಗೂ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆರೋಪಿ ಕಾಮುಕ ಮಾಲಿಕನನ್ನು ಬಂಧಿಸಲಾಗಿದೆ. ಈತ ತನ್ನ ತೋಟದ ಮನೆಯಲ್ಲಿ ಹಲವಾರು ಬಾರಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಕೊನೆಗೆ ಕಾರ್ಮಿಕರ ಒಕ್ಕೂಟದ ಸಹಾಯದಿಂದ ಪೊಲೀಸರ ನೆರವು ಪಡೆದಿದ್ದಾಳೆ.