Publish Date: Wed, 07 Oct 2020 (10:31 IST)
Updated Date: Wed, 07 Oct 2020 (10:33 IST)
ಬೆಂಗಳೂರು: ಮಾಸ್ಕ್ ಧರಿಸದೇ ತಿರುಗಾಡುವವರಿಗೆ ಬಿಬಿಎಂಪಿ ಈಗ ಬೆಂಗಳೂರು ನಗರದಲ್ಲಿ 1000 ರೂ. ದಂಡ ವಸೂಲಿ ಮಾಡುವ ನಿಯಮ ಮಾಡಿದೆ. ಆದರೆ ದಂಡ ಕಟ್ಟಲಾಗದೇ ಯುವಕನೊಬ್ಬ ಕಣ್ಣೀರು ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಸ್ಕ್ ಧರಿಸದೇ ಓಡಾಡಿದ್ದಕ್ಕೆ ಯುವಕನೊಬ್ಬನಿಗೆ ಬಿಬಿಎಂಪಿ ಮಾರ್ಷಲ್ ಗಳು ದಂಡ ಕಟ್ಟಲು ಸೂಚಿಸಿದ್ದಾರೆ. ಆದರೆ ನನ್ನತ್ರ ದುಡ್ಡೇ ಇಲ್ಲ ಸಾರ್. ಹಣ ಹೇಗೆ ಕಟ್ಟಲಿ? ವಾಕಿಂಗ್ ಗೆ ಅಂತ ಬಂದಿದ್ದೆ. ಈ ಒಂದು ಸಾರಿ ಬಿಟ್ಟುಬಿಡಿ. ಇನ್ನು ಹೀಗೆ ಮಾಡಲ್ಲ ಎಂದು ಕಣ್ಣೀರು ಹಾಕಿದ್ದಾನೆ. ಆದರೆ ಇದಕ್ಕೆ ಬಗ್ಗದ ಮಾರ್ಷಲ್ ಗಳು ಆತನಿಂದ ಹೇಗಾದರೂ ದಂಡ ವಸೂಲಿ ಮಾಡಿಯೇ ಬಿಡುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.