ನವದೆಹಲಿ : ಗುಜರಾತ್ ತನ್ನ ಸಂಸ್ಥಾಪನಾ ದಿನವನ್ನು ಮೇ 1 ರಂದು “ಗುಜರಾತ್ ಗೌರವ ದಿನ” ಎಂದು ಆಚರಿಸುತ್ತದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಅವರು, “ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾನ್ ನಾಯಕರ ಜನ್ಮಸ್ಥಳವಾದ ಗುಜರಾತ್ ಭಾರತದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ. ಗುಜರಾತ್ ದಿನದಂದು ಗುಜರಾತ್ ಜನತೆಗೆ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಜನರಿಗೆ ಶುಭಾಶಯ ತಿಳಿಸಿದ್ದಾರೆ. ಗುಜರಾತ್ ತನ್ನ ಸರ್ವತೋಮುಖ ಪ್ರಗತಿ ಮತ್ತು ಅದರ ವಿಶಿಷ್ಟ ಸಂಸ್ಕೃತಿಯಿಂದಾಗಿ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯ ಹೊಸ ಮೈಲುಗಲ್ಲು ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಮೇ 1, 1960 ರಂದು ಗುಜರಾತ್ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಗುಜರಾತಿಗಳು ಅದರತ್ತ ಮುನ್ನಡೆದಿದ್ದಾರೆ. ಅಭಿವೃದ್ಧಿ, ಭೂಕಂಪ, ಪ್ರವಾಹ, ಕೊರೊನಾ ಸಾಂಕ್ರಾಮಿಕ.. ಹೀಗೆ ನಾನಾ ವಿಪತ್ತುಗಳನ್ನು ಗುಜರಾತಿಗಳು ದೃಢಸಂಕಲ್ಪದಿಂದ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ.