Publish Date: Fri, 28 Apr 2023 (07:06 IST)
Updated Date: Fri, 28 Apr 2023 (10:07 IST)
ಮಂಗಳೂರು : ಕಾಂಗ್ರೆಸ್ 5ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಘೋಷಿಸಿದೆ.
ಚುನಾವಣೆಗೆ ಮೊದಲು ಕಾಂಗ್ರೆಸ್ನ ಹಿರಿಯ ನಾಯಕರನ್ನು ಭೇಟಿ ಆದೆವು. ಅಲ್ಲಿ ನಾವು ರಾಜ್ಯದ ಜನರಿಗೆ ಏನು ಕೊಡಬಹುದು ಅಂತ ಕೇಳಿದೆ. ಮಹಿಳೆಯರು, ಕಾರ್ಮಿಕರು, ಕೃಷಿಕರಲ್ಲೂ ನಾವು ಅದನ್ನು ಕೇಳಿದೆವು. ನಮ್ಮ ಪ್ರಶ್ನೆಗೆ ನೀವು 4 ಉತ್ತರ ಕೊಟ್ರಿ. ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳೆಯರು ಗೃಹ ಲಕ್ಷ್ಮಿ ಭರವಸೆ ಕಾಂಗ್ರೆಸ್ ಪಕ್ಷ ನೀಡಿದೆ ಎಂದರು.
ಪ್ರತೀ ಕುಟುಂಬದ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ರೂ., ಗೃಹಜ್ಯೋತಿ ಮೂಲಕ 200 ಯುನಿಟ್ ವಿದ್ಯುತ್ ಉಚಿತ, 10 ಕೆ.ಜಿ ಉಚಿತ ಪಡಿತರ ಅಕ್ಕಿ, ಪದವೀಧರರಿಗೆ 1500 ರೂ. ನೀಡುವ ಭರವಸೆ ನೀಡಿದೆ. ರಾಜ್ಯದಲ್ಲಿ ಹಣಕ್ಕೆ ಏನೂ ಕೊರತೆ ಇಲ್ಲ, ಈ ಕೆಲಸವನ್ನು ಪ್ರಾಮಾಣಿಕ ಸರ್ಕಾರ ಮಾಡಲಿದೆ. ಮೊದಲ ಕ್ಯಾಬಿನೆಟ್ನಲ್ಲೇ ಇದು ಜಾರಿ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.