Publish Date: Sat, 29 Apr 2023 (08:51 IST)
Updated Date: Sat, 29 Apr 2023 (09:55 IST)
ಕಲಬುರಗಿ : ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ರಾಜ್ಯಕ್ಕೆ ಆಗಮಿಸಿ ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ಪ್ರಚಾರ ಕಾರ್ಯಕ್ರಮವನ್ನು ನಡೆಸಿದ್ದಾರೆ.
ನಗರಗಳಲ್ಲಿ ನಡೆಸಿದ ಸಮಾವೇಶದ ವೇಳೆ ಮಳೆ ಸುರಿದಿದ್ದರೂ ರಾಗಾ ಮಳೆಯನ್ನು ಲೆಕ್ಕಿಸದೇ ಭಾಷಣ ಮಾಡಿದ್ದಾರೆ.
ಜೇವರ್ಗಿಯಲ್ಲಿ ಅಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ರಾಹುಲ್ ಗಾಂಧಿ ಆಗಮನಕ್ಕೂ ಮುನ್ನವೇ ಮಳೆ ಶುರುವಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಕ್ರೀಡಾಂಗಣದ ಗ್ಯಾಲರಿಯಲ್ಲಿ ಜನರು ಆಶ್ರಯ ಪಡೆದರು. ನೂರಾರು ಜನ ತಲೆ ಮೇಲೆ ಕುರ್ಚಿ ಹೊತ್ತು ಕಾರ್ಯಕ್ರಮದಲ್ಲಿ ಭಾಗಿಯಾದರು.