Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಿಯಾಂಕ ಗಾಂಧಿ ನಿಂದನೆ ಮಾಡಿದವರ ವಿರುದ್ಧ ಇಂದಿನಿಂದ ಎಫ್‍.ಐ.ಆರ್ ದಾಖಲು

ಪ್ರಿಯಾಂಕ ಗಾಂಧಿ ನಿಂದನೆ ಮಾಡಿದವರ ವಿರುದ್ಧ ಇಂದಿನಿಂದ  ಎಫ್‍.ಐ.ಆರ್ ದಾಖಲು
ನವದೆಹಲಿ , ಸೋಮವಾರ, 4 ಫೆಬ್ರವರಿ 2019 (06:51 IST)
ನವದೆಹಲಿ : ಕಾಂಗ್ರೆಸ್ ಪಕ್ಷದ ಪ್ರಧಾನ ಉಸ್ತುವಾರಿ ಕಾರ್ಯದರ್ಶಿ ಆಗಿ ನೇಮಕ ಮಾಡಲಾಗಿದ್ದ ಪ್ರಿಯಾಂಕ ಗಾಂಧಿ ವಿರುದ್ಧ ಇಂದಿನಿಂದ ಕೀಳುಮಟ್ಟದ ಪ್ರಚಾರ ನಡೆಸಿದರೆ, ಅವರ ವಿರುದ್ಧ ಎಫ್‍.ಐ.ಆರ್ ದಾಖಲಾಗಲಿದೆ ಎನ್ನಲಾಗಿದೆ.


ಉತ್ತರ ಪ್ರದೇಶ ಪೂರ್ವ ವಿಭಾಗಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ನ ಪ್ರಧಾನ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಅಂದಿನಿಂದ ಪ್ರಿಯಾಂಕಾ ವಾದ್ರಾ ವಿರುದ್ಧ ಕೀಳುಮಟ್ಟದ ಪ್ರಚಾರ ನಡೆಸಿಲಾಗುತಿದೆ. ಈ ಬಗ್ಗೆ ಕಾಂಗ್ರೆಸ್ ಮಹಿಳಾ ಘಟಕಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆದ್ದರಿಂದ ಪ್ರಿಯಾಂಕಾ ವಾದ್ರಾ ವಿರುದ್ಧ ಕೀಳುಮಟ್ಟದ ಪ್ರಚಾರ ನಡೆಸಿದವರ ಅವರ ವಿರುದ್ದ ದೇಶಾದ್ಯಂತ ಕಾಂಗ್ರೆಸ್ ಮಹಿಳಾ ಘಟಕ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್‍.ಐ.ಆರ್ ದಾಖಲಿಸಲಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾಧ್ಯಮಪ್ರಕಣಣೆ ಹೊರಡಿಸಿದ್ದು, ಈ ಬಗ್ಗೆ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ರವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



Share this Story:

Follow Webdunia kannada

ಮುಂದಿನ ಸುದ್ದಿ

ಜಪಾನಿನಲ್ಲಿ ಹೆಚ್ಚಾಗಿ ವೃದ್ಧರು ಅಪರಾಧವೆಸಗಿ ಜೈಲಿಗೆ ಹೋಗುತ್ತಿದ್ದಾರಂತೆ. ಯಾಕೆ ಗೊತ್ತಾ?