Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಪಾನಿನಲ್ಲಿ ಹೆಚ್ಚಾಗಿ ವೃದ್ಧರು ಅಪರಾಧವೆಸಗಿ ಜೈಲಿಗೆ ಹೋಗುತ್ತಿದ್ದಾರಂತೆ. ಯಾಕೆ ಗೊತ್ತಾ?

ಜಪಾನಿನಲ್ಲಿ ಹೆಚ್ಚಾಗಿ  ವೃದ್ಧರು ಅಪರಾಧವೆಸಗಿ  ಜೈಲಿಗೆ ಹೋಗುತ್ತಿದ್ದಾರಂತೆ. ಯಾಕೆ ಗೊತ್ತಾ?
ಜಪಾನ್ , ಸೋಮವಾರ, 4 ಫೆಬ್ರವರಿ 2019 (06:36 IST)
ಜಪಾನ್ : ಜಪಾನಿನಲ್ಲಿ ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿರುವ ವೃದ್ಧರು ತಾವು ವಾಸಿಸಲು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಜಪಾನಿನ ಜೈಲಿನಲ್ಲಿ ವೃದ್ಧ ಅಪರಾಧಿಗಳಿಗೆ ವಿಶೇಷ ಸೌಲಭ್ಯವನ್ನು ಒದಗಿಲಾಗಿದೆ. ಅಲ್ಲಿ ಅವರ ಆರೈಕೆಯನ್ನು ಜೈಲಿನ ಸಿಬ್ಬಂದಿಗಳೇ  ಮಾಡ್ತಾರೆ. ಅಲ್ಲದೇ ಅಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ಕೂಡ ಇದೆ.


ಆ ಕಾರಣದಿಂದ ಕುಟುಂಬದಲ್ಲಿ ಸಮಸ್ಯೆಯಿರುವ ವೃದ್ಧರು ಪದೇ ಪದೇ ಅಪರಾಧ ಮಾಡಿ ಜೈಲಿಗೆ ಹೋಗ್ತಿದ್ದಾರೆ. ಇದರಿಂದ ಕಳೆದ 20 ವರ್ಷಗಳಿಂದ 65 ವರ್ಷ ಮೇಲ್ಪಟ್ಟ ಹಿರಿಯರು ಜೈಲಿಗೆ ಹೋಗುತ್ತಿರುವ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದು, ಎರಡು ವರ್ಷಗಳ ಹಿಂದೆ ಅಪರಾಧ ಮಾಡಿದ ವೃದ್ಧರ ಸಂಖ್ಯೆ 2500 ಆಗಿದೆ. ಸರಿಯಾಗಿ ನಡೆದಾಡಲು ಆಗದ, ಅನಾರೋಗ್ಯ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳು ಜೈಲಿಗೆ ಹೋಗ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೀವ ಉಳಿಸುವ ವೈದ್ಯನಿಂದ ನಡೆದಿದೆ ಇಂತಹ ನೀಚ ಕೃತ್ಯ