Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈತರಿಗೆ ಒಂದು ದಿನಕ್ಕೆ 17 ರೂ. ನೀಡಿದ್ದಕ್ಕೆ ಮೋದಿ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ

ರೈತರಿಗೆ ಒಂದು ದಿನಕ್ಕೆ 17 ರೂ. ನೀಡಿದ್ದಕ್ಕೆ ಮೋದಿ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ
ನವದೆಹಲಿ , ಶನಿವಾರ, 2 ಫೆಬ್ರವರಿ 2019 (08:10 IST)
ನವದೆಹಲಿ : ಕೇಂದ್ರ ಬಜೆಟ್ ನ ವಿಚಾರಕ್ಕೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ರೈತರಿಗೆ ದಿನಕ್ಕೆ 17 ರೂ. ನೀಡಿ ಅವಮಾನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಪ್ರತಿ ವರ್ಷಕ್ಕೆ 6,000 ರೂ. ಬೆಂಬಲ ನೀಡುವುದಾಗಿ  ಘೋಷಣೆ ಮಾಡಲಾಗಿದೆ. ಈ ಹಣವನ್ನು ಒಂದು ದಿನಕ್ಕೆ ಲೆಕ್ಕ ಹಾಕಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

 

ಬಜೆಟ್ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು, ಡಿಯರ್ ನಮೋ(ಓoಒo), ಐದು ವರ್ಷಗಳಿಂದ ನೀಡುತ್ತಿರುವ ನಿಮ್ಮ ಅಸಮರ್ಥತೆ ಹಾಗೂ ಅಹಂಕಾರ ರೈತರ ಜೀವನವನ್ನು ನಾಶಗೊಳಿಸುತ್ತಿದೆ. ಒಂದು ದಿನಕ್ಕೆ ರೈತರಿಗೆ 17 ರೂ. ನೀಡುತ್ತಿರುವುದು ಅವರಿಗೆ ಹಾಗೂ ಅವರ ಕೆಲಸಕ್ಕೆ ಮಾಡುವ ಅವಮಾನ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಖರ್ಗೆಗೆ ಸೋಲಿನ ಭೀತಿ ಇಲ್ವಂತೆ!