Publish Date: Thu, 28 Jan 2021 (09:49 IST)
Updated Date: Thu, 28 Jan 2021 (09:52 IST)
ಥಾಣೆ : ಮಗಳ ಜೊತೆ ಸಂಬಂಧ ಮುರಿಯಲು ನಿರಾಕರಿಸಿದ 18 ವರ್ಷದ ಯುವಕನ ಮೇಲೆ ತಂದೆ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಯುವತಿ ಹಾಗೂ ಸಂತ್ರಸ್ತ ಬಹಳ ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದು ಇಷ್ಟವಾಗದ ಯುವತಿಯ ತಂದೆ ಸಂಬಂಧ ಮುರಿದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಯುವಕ ಅದನ್ನು ನಿರಾಕರಿಸಿದ್ದಕ್ಕೆ ಆತನ ಖಾಸಗಿ ಭಾಗಕ್ಕೆ ರಾಡ್ ನಿಂದ ಒದ್ದು ಹಲ್ಲೆ ಮಾಡಿ ಬೆಟ್ಟದಿಂದ ತಳ್ಳಿದ್ದಾರೆ.
ತನ್ನ ಸ್ನೇಹಿತರ ಸಹಾಯದಿಂದ ಬದುಕುಳಿದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.