Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ: ತಂದೆಯೆಂದರೆ ಹೆಣ್ಣು ಮಕ್ಕಳ ಪಾಲಿಗೆ ನಂಬಿಕೆ, ಹೀರೋ. ಆದರೆ ಇಲ್ಲೊಬ್ಬ ತಂದೆ ಆ ಮಾತನ್ನೇ ಸುಳ್ಳು ಮಾಡಿದ್ದಾನೆ.
ಕೆಲವು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ 9 ವರ್ಷದ ಮಗಳನ್ನು ತಂದೆಯೇ ನೋಡಿಕೊಳ್ಳುತ್ತಿದ್ದ. ಆದರೆ ಅದೇನು ಕೇಡು ಬುದ್ಧಿಬಂತೋ. ರಾತ್ರಿ ಪಕ್ಕದಲ್ಲೇ ಮಲಗಿದ್ದ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ್ದಾನೆ.
ಬಾಲಕಿ ಜೋರಾಗಿ ಕೂಗಿಕೊಂಡ ಸದ್ದು ಕೇಳಿ ತಂದೆಯ ಅಣ್ಣ ಧಾವಿಸಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.