Publish Date: Wed, 15 Dec 2021 (11:24 IST)
Updated Date: Wed, 15 Dec 2021 (09:25 IST)
ಹಾಸನ: ಮಹಿಳೆಯೊಬ್ಬರಿಗೆ ಅನಾರೋಗ್ಯ ನೀಗಿಸುವುದಾಗಿ ಮಾಂತ್ರಿಕನೊಬ್ಬ ಬೆತ್ತದಿಂದ ಹೊಡೆದು ಆಕೆಯ ಸಾವಿಗೆ ಕಾರಣವಾದ ಘಟನೆ ಬಗ್ಗೆ ಓದಿರುತ್ತೀರಿ. ಆದರೆ ಆರೋಪಿ ಮಾಂತ್ರಿಕ ಇದುವರೆಗೆ ಬಂಧನಕ್ಕೊಳಗಾಗಿಲ್ಲ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಲೇ ಇದ್ದಾರೆ. ಇದುವರೆಗೆ ಆತನ ಪತ್ತೆಯಾಗಿಲ್ಲ.
ಮಹಿಳೆಗೆ ತಲೆನೋವಿನ ಸಮಸ್ಯೆಯಿತ್ತು. ಎಷ್ಟೇ ವೈದ್ಯರ ಬಳಿ ಹೋದರೂ ಖಾಯಿಲೆ ವಾಸಿಯಾಗಿರಲಿಲ್ಲ. ಆಗ ಆಕೆಯ ಸಂಬಂಧಿಕರ ಸಲಹೆಯಂತೆ ಮಾಂತ್ರಿಕನ ಬಳಿ ಪರಿಹಾರಕ್ಕೆ ಹೋಗಿದ್ದರು. ಆದರೆ ಮಾಂತ್ರಿಕ ಆಕೆಗೆ ಮಾಟ-ಮಂತ್ರ ಮಾಡಲಾಗಿದೆ ಎಂದು ಮೈಮೇಲೆ ಬೆತ್ತದಿಂದ ಯದ್ವಾ ತದ್ವಾ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಳು.